ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವ್ವ ನಿರದ ಅಡಿಗೆ ಮನೆ

ಅವ್ವ…. ನೀನಿರದ ಅಡುಗೆ ಮನೆ
ಬಿರುದು ಬಿಕೋ ಎನ್ನುತ್ತಿದೆ ಮನ
ನಿನ್ನ ಅಡಿಗೆ ಅಮೃತ.. ಪಾನ
ಸವಿದು ಪಾವನ ನನ್ನ ಜನನ..

ಅಡುಪಾತ್ರೆಗಳು ಮೌನದಿ ನಿಂದಿವೆ
ನಿನ್ನ ಮೃದು ನಡಿಗೆಯ ಸದ್ದು ಅಡಗಿದೆ
ನೀ ತಿಡದ ಚಪಾತಿ ಒಣಗಿ ಸೋರಗಿವೆ
ನಿಕಲಿಸದ ಅವಲಕ್ಕಿ ರುಚಿ ಮಾಯವಾದೆ.

ಒಂದೊಂದು ಪಡಿ ಪದಾರ್ಥಗಳಲಿ
ಬೆರೆಸಿದ ನಿನ್ನ ಪ್ರೀತಿಯ ಸವಿಯಲಿ
ತುತ್ತು ಉಂಡುಂಡು ಬೆರತೇವು ನಿನ್ನಲಿ
ನಿನ್ನ ಮಮಕಾರ ಸಾಗರದ ಆಳದಲಿ ..

ನಲಿದಾಡುತ್ತಿದ್ದೆವು ಪರಮ ಆನಂದ-
ಸರೋವದಿ-ಹೊರದೂಡಿದ ಮೀನಂತೆ
ಚಡಿಪಡಿಸುತ್ತಿರುವೆ -ನಿನ್ನ ಕೈ ತುತ್ತಿನ
ರುಚಿಗಾಗಿ ಅರಸುತಿರುವೆ ……ಅವ್ವಾ

ಎಲ್ಲೆಲ್ಲೋ ಎತ್ತಲೊ ಅಲ್ಲಿ ಇಲ್ಲಿ
ಅಲ್ಲೆಲ್ಲೋ ಅತ್ತೆಲ್ಲೆಲ್ಲೋ ಕಾಣದಾಗಿದೆ
ನಿನ್ನ -ಸ್ವಾದ-ರುಚಿ -ಶುಚಿ ಸಿಗದಾಗಿದೆ
ಅಡುಗೆ -ಜೀವನದ-ಸೊಗಡು ಸೊಗಸು …

ಅಡುಗೆ ಸುವಾಸನೆಯ ಘಮಘಮವಿಲ್ಲ
ಅಡುಗೆ ಮನೆಯಲಿ ನಿನ್ನ ಸುಳಿವಿಲ್ಲ
ಆ ನಿನ್ನ ಅಡುಗೆಯ ಸ್ವಾದಿಲ್ಲ-ಬದುಕಿಲ್ಲ
ಕಕ್ಕುಲತೆಯಲಿ ಬೆದರಿ ನೆನಹುನಲಿ ನಿಂತಿರೆ..

ಲೋಕದ ನೋವು ಇರಲಿ ನೂರೊಂದು
ಕಾಟ ಕೂಟವದು ಹಲವು -ಗೋಳುಗಳು
ತಾಳಬಹುದು, ನೀನಿರದ ಅಡುಗೆ ಮನೆ-
ಬದುಕು ಮೌನವಾಗಿದೆ ನೆಲಹಿನಲಹರಿಯಲಿ..

ನೀನಿಲ್ಲದ ಅಡುಗೆಮನೆ-ಮನೆಅಂಗಳ-
ಮನ-ಮೌನ ಕೊಂಡಿವೆ ಎಲ್ಲವೂ-ಸ್ಥತಬ್ದ.
ಬಾಯಿ ಇಲ್ಲದ ಮಾತುಗಳ ಮನೆಯಾಗಿದೆ
ಅವ್ವ..ಸವಿಯ ರುಚಿಯ ಸವಿಯಿಲ್ಲವಾಗಿದೆ..

ಶುಭ- ಅಭಯ ತುತ್ತಿನ ತೊತ್ತಿನಲಿ
ಬೆರೆಸಿದ ನಿನ್ನೊಲುಮೆಯ ರುಚಿಇಲ್ಲ-
ಬದುಕು ಬವಣೆ ಇಲ್ಲ,ಬಾಳಲಿ ಸವಿತರಲು
ಮತ್ತೆ ನೀ ಬರುವೆಯಾ…..ಅವ್ವ??

ನಿನ್ನ ಸಾಧ್ವಿ ಕೈಗಳ ಸವಿರುಚಿಯ ಸವಿಸಲು” ….
————————

About The Author

Leave a Reply

You cannot copy content of this page

Scroll to Top