ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸೋತಿಹೆನೆಲ್ಲಿ..!!!
ಎಲ್ಲಿ ಎಲ್ಲೆಂದು ಅತ್ತಿಂದಿತ್ತ ಇತ್ತಿಂದತ್ತ
ಎತ್ತ ನೋಡಿದರತ್ತ ಕಾಣದು
ಸೋಲಿನ ಕುರುಹು
ಸೊಲ್ಲಿನ ಸ್ವರಾಜ್ಯದಲಿ
ಸೋತು ಸುಣ್ಣವಾಗಿ ಅಡಗಿದೆ ಅಶ್ರು
ಹುಡುಕಬೇಕಿದೆ ಸೋಲಿನ ಸುಳುಹು
ಕೆದಕಬೇಕಿದೆ ಅಶ್ರುವಿನ ಅಮಲು

ತುಳಿದು ತಿಪ್ಪೆ ಹಾಕುತಿದೆ
ಮನದ ಮೂಲೆಯ ಕನರು
ಬೊಬ್ಬಿಡುವ ಮುನ್ನವೇ
ಹಬ್ಬಿ ಬಿಡಲಿ ಮೌನದೊಡಲ ಕಮಟು
ಬುಗಿಲೆದ್ದ ಬಾಷ್ಪಗಳಿಗೆ
ಬಾಡೂಟದ ಬಯಕೆ
ಬೀಸುತಿದೆ ಪಾಶದಂತೆ
ಮತ್ತೆ ಮತ್ತೆ ಸೋಲಿನ ಕುಣಿಕೆ

ಎದೆಯೀಗ ಅನಲನ ಆವಾಸಸ್ಥಾನ
ಮನದಂಗಳವೆ ಮರುಭೂಮಿ
ಉರಿಯುತಿದೆ ಸೋಲಿನ ಸೊಡರು
ಸವಾಲಿಗೂ ಸೆಡ್ಡು ಹೊಡೆದ ಸೋಲು
ಸುತ್ತು ಮುತ್ತ ಸೋಲುಗಳ ಗಸ್ತು
ಸಾಧಿಸುವ ಛಲಕೂ ಒಳಗೊಳಗೆ ಸುಸ್ತು

ಮನದೊಳಗೆ ಉಗ್ರರ ಅಟ್ಟಹಾಸ
ಅಗ್ರಸ್ಥಾನದಲ್ಲಿ ನಾನೆಂಬ
ಭಾವವೋ ಅಹಂಭಾವವೋ
ಅರಿತವರಾರು, ಅರಿಯುವವರಾರು
ಮತ್ತೆ ಮತ್ತೆ ದ್ವಂಸವಾಗುತಿದೆ ದಿಟ್ಟತನ
ಎದುರಿನವರಿಂದಲೋ
ಎದುರಾಳಿಯಿಂದಲೋ
ಬಲ್ಲವರಾರು..ಬೆಂದ ಮನದ ಬೇಗುದಿ??


About The Author

Leave a Reply

You cannot copy content of this page

Scroll to Top