ಕಾವ್ಯ ಸಂಗಾತಿ
ಸುವರ್ಣ ಕುಂಬಾರ
ಪಾರಿಜಾತ ಪ್ರೇಮ


ಪ್ರೇಮದ ಪರಿಗೆ ಪರೀಕ್ಷೆಯು ನಿರಂತರ
ಉಳಿಸಲಿಲ್ಲ ಆ ಭಗವಂತನಿಗೂ ಅಂತರ
ಸತಿ ಶಿರೋಮಣಿಗೆ ಬಾಗಿದ ಪುರುಷೋತ್ತಮನು
ಒಲವಿನ ಲೀಲೆಯಲ್ಲಿ ಸೋತು ಶರಣಾದನು
ಸಂಚಾರದ ಸಂಧಿಯಲ್ಲಿ ಸಂಧಿಸಿತಂದು ಸುಗಂಧವು
ಮೆಚ್ಚಿದ ಮಡದಿಗೆ ನವೋಲ್ಲಾಸದ ಆನಂದವು
ಏನ್ನೆಂದು ಕೇಳಿದಳು ಭಾಮೆ ಕೃಷ್ಣನಿಗಂದು
ಇಂದ್ರವನದ ಅಮೂಲ್ಯ ಪುಷ್ಪ ಪರಿಮಳವೆಂದು
ಹಬ್ಬಿತು ಮನದಲೊಂದು ಆಸೆಯ ಬಳಿಯು
ಮನೆಯಂಗಳದಲ್ಲಿ ಅರಳಲೆ ಬೇಕು ಕುಸುಮವು
ಕೇಳಿಹೇಳಿ ತಿಳಿಯದ ಇಂದ್ರನ ಮಂದಮತಿಯು
ಯುದ್ದದಲ್ಲಿ ಸೋಲುಂಡು ಒಪ್ಪಿಸಿದನು ಮರವು
ವಸುಂಧರೆಯ ಸೇರಿತು ಪ್ರೇಮ ಪಾರಿಜಾತವು
ಸುಗಂಧಮಾಲೆಯ ಸುಮಧುರ ಕಥೆಯ ಸಾರವು
ಪ್ರೀತಿಗೆ ದೇವ ಮಾನವ ಎನ್ನುವ ಅಂತರವಿಲ್ಲ
ಅನುರಾಗದಲ್ಲಿ ಮುಳಗಿದ ಮನಗಳಿಗೆ ಕೃಷ್ಣನೆ ಬೆಳಕಿಲ್ಲಿ
ಸುವರ್ಣ ಕುಂಬಾರ




So nice