ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ ಬರೆಯಬೇಕು ಅವ್ವನ ಮೇಲೆ
ಕಣ್ಮುಂದೆ ಅವ್ವನ ಮುಖ ಬರುತ್ತಿಲ್ಲ
ಯಾರು ಹೇಳಿದರೂ ನೆನಪಾಗುತ್ತಿಲ್ಲ
ಎತ್ತಿಆಡಿಸಿ ಕುಡಿಸಿದ ಹಾಲು ಗೊತ್ತಿಲ್ಲ

ಅವ್ವನದು ಹಳ್ಳಿ ಒಕ್ಕಲುತನದ ಮನೆ
ರೋಗ ರುಜಿನಕ್ಕೆ ದವಾಖಾನೆಯಿಲ್ಲ
ದೇವರು ನನ್ನವ್ವನ್ನ ಕರೆದುಕೊಂಡಾಗ
ನಾನು ಒಂದುವರ್ಷದ ತೊಟ್ಟಿಲಕಂದ

ಅಪ್ಪನು ಸರ್ಕಾರಿ ನೌಕರ ಪರಊರಲ್ಲಿ
ಸೋದರತ್ತೆಯ ಆಸರೆ ಅಣ್ಣತಮ್ಮರಿಬ್ಬರಿಗೆ
ದುರ್ದೈವಕೆ ಅತ್ತೆಯ ಗಂಡನ ಮರಣ
ಮಕ್ಕಳಿಲ್ಲದ ಅತ್ತೆಗೆ ನಾವೇ ಮಕ್ಕಳಾದೆವು

ತವರಿಗೆ ಬಂದ ಅತ್ತೆ ಅವ್ವಾದಳು ನಮಗೆ
ಕುಂಡಿ ತೊಳೆದು ಸುಂಬಳ ಒರೆಸಿದಳು
ಜಡ್ಡುಜಾಪತ್ರಿಗೆ ಶುಂಠಿ ಖಾಡೆ ಕುಡಿಸಿದಳು
ಕೌದಿ ಮೇಲೆ ಮಲಗಿದರೆ ಸೆರಗೆ ಹೊದಿಕೆ

ಬಡತನ ತಾಂಡವವಾಡುತ್ತಿತ್ತು ಮನೆಯಲ್ಲಿ
ಬಿಸಿರೊಟ್ಟಿ ಪಲ್ಯ ನಮಗೆ ಬುತ್ತಿ ಕಳಿಸಿ
ತನಗೆ ಮಾತ್ರ ತಂಗಳರೊಟ್ಟಿ ಮಜ್ಜಿಗೆ ಊಟ
ದೇವರಾಣೆಗೂ ಅತ್ತೆಯಲ್ಲ ನನ್ನವ್ವನೇ ಅವಳು

ಸೆಗಣಿ ಸಾರಣೆ ನೆಲ ಮಣ್ಣಿನ ಮನೆಯಲ್ಲಿದ್ದು
ಸ್ವಂತ ಮನೆ ಮಾಡಿದಾಗ ಸೋಫಾ ನೋಡಿ
ಮೊಮ್ಮಕ್ಕಳನು ಆಡಿಸಿ ಆನಂದದಿಂದ
ಶತಾಯುಷಿ ಅತ್ತೆ ಅವ್ವನ ಪಾತ್ರಕೆ ವಿದಾಯ


About The Author

Leave a Reply

You cannot copy content of this page

Scroll to Top