ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಲೋ
ನಾವೀಗ  4. ಜಿ, ಮತ್ತು 5ಜಿಗಳ  
ಕಾಲದಲ್ಲಿ ತಂತ್ರಜ್ಞಾನಗಳ.  ಹೊಸ್ತಿಲಲ್ಲಿ ಬದುಕುತ್ತಿದ್ದೇವೆ. ಆದರೂ ಈಗಲೂ ಜನರನ್ನು, ಸಂಬಂಧಗಳನ್ನು ಬೆಸೆಯುವ  ಕೊಂಡಿಗಳಾಗಿ  ಕಾರ್ಯ  ನಿರ್ವಹಿಸುತ್ತವೆ,ಭಾರತದಲ್ಲಿ, ಅಂಚೆ, ಸಂಪರ್ಕ ಮಾಧ್ಯಮಗಳು ಜನರ ಜೀವನದಲ್ಲಿ ಬೆಸೆದು ಬಿಟ್ಟಿವೆ.
ನಾವು ಚಿಕ್ಕವರಿದ್ದಾಗ ಅಂಚೆ ಇಲಾಖೆ ನಮ್ಮ ಜೀವನದಲ್ಲಿ ಪ್ರಮುಖ ಅಂಗ ವಾಗಿ ಬಿಟ್ಟಿತು. ನಾಕಾಣೆ, ಎಂಟಾಣೆ ಗೆ ಸಿಗುತ್ತಿದ್ದ ಪೋಸ್ಟ್ ಕಾರ್ಡ್ ಜನರ ಜೀವನದ ಅತಿ ಅಗ್ಗ ಸಂಪರ್ಕ ಸಾಧನ ವಾಗಿತ್ತು. ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಅರ್ಧ ಬರೆಯುತ್ತಿದ್ದ ಪೋಸ್ಟ್ ಪತ್ರ   ಪೋಸ್ಟ್ ಕಾರ್ಡ್ ನಲ್ಲಿ  ಫುಲ್ ಬರೆಯಬೇಕೆಂದು  ಹಿರಿಯರ ಅಲಿಖಿತ ಆಜ್ಞೆ ಯಾಗಿತ್ತು.ನಂತರ ಬರೆಯುತ್ತಿದ್ದ ಇನ್ಲಾಂಡ್ ಲೆಟರ್ ಪತ್ರ ತುಂಬಾ ಬರೆಯಲು ಪ್ರೇರೇಪಿಸುತ್ತಿತ್ತು. ಈ ಸಂಪರ್ಕ ಮಾಧ್ಯಮಗಳ ಮಹತ್ವವನ್ನು ಸಾರಲು ಪ್ರತಿ ವರ್ಷ ಮೇ 17ರಂದು ದೂರ ಸಂಪರ್ಕ ದಿನವಾಗಿ ಆಚರಿಸಲಾಗುತ್ತಿದೆ.

ನಂತರ ಬಂದ ಟೆಲಿಗ್ರಾಂ ಒಂದು ಹೊಸ ಕ್ರಾಂತಿಯನ್ನೇ ಮಾಡಿ ಬಿಟ್ಟಿತು. ,””Start Immediately “”ಮುಂತಾದ ಟೆಲಿಗ್ರಾಂ ಸಂದೇಶಗಳು, ಮನೆಯಲ್ಲಿ ಯಾರಾದರೂ ಸೀರಿಯಸ್ ಇದ್ದರೆ, ತುರ್ತು ಸಂದೇಶವಾಗಿ ಕೆಲಸ ಮಾಡುತ್ತಿತ್ತು. ನೌಕರಿಯಲ್ಲಿ.  ಸಂದರ್ಶನಕ್ಕೆ. ಕರೆ ಮಾಡಲು, ಟೆಲಿಗ್ರಾಂ ಸಂದೇಶಗಳನ್ನು ಬಳಸಲಾಗುತ್ತಿತ್ತು. ಆದರೆ ಅದೇ ಕಾಲಕ್ಕೆ ಹಳ್ಳಿಯಲ್ಲಿ ಟೆಲಿಗ್ರಾಂ ಸಂದೇಶ ಬಂದರೆ ಏನಾದರೂ ಅನಾಹುತ ಆಗಿದೆ ಎಂದು ಜನ ಗಾಬರಿಯಾಗಿದ್ದು ಉಂಟು.ನಂತರ ಬಂದ  ಫ್ಯಾಕ್ಸ್, ಪೇಜರ್,ಟೆಲಿಫೋನ್, ಲ್ಯಾಂಡ್ಲೈನ್, ಮುಂತಾದವುಗಳು ನಮ್ಮ ಜೀವನದಲ್ಲಿ ಕ್ರಾಂತಿ ಕಾರಕ ಬದಲಾವಣೆಗಳನ್ನು ತಂದವು. STD  ಕಾಲ್ಗಳು, coin Box,  ಪ್ರತಿ ಹಳ್ಳಿಗಳಿಗೆ ತಲುಪಿದ್ದವು. ನಂತರ ಬಂದ ವೈರ್ಲೆಸ್, ಮುಂತಾದವುಗಳು ಸಂಪರ್ಕ  ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವು.
ಹೊಸ ಆರ್ಥಿಕ ನೀತಿಯ ಪರಿಣಾಮವಾಗಿ ಬಂದ ಮೊಬೈಲ್ ತಂತ್ರಜ್ಞಾನ,4ಜಿ,5ಜಿಗಳು ,  ಹಾಟ್. ಲೈನ್  ಕಮ್ಯುನಿಕೇಶನ್ ಜನರನ್ನು ಮತ್ತಷ್ಟು ಸನಿಹಕ್ಕೆ ತಂದವು.
ಈಗಂತೂ ಸಮಾಜಿಕ ಜಾಲ ತಾಣಗಳು ಜಗತ್ತನ್ನು ಒಂದು ಪುಟ್ಟ ಹಳ್ಳಿಯನ್ನಾಗಿ ಪರಿವರ್ತಿಸಿ ಜಾಗತಿಕ ಮಟ್ಟದಲ್ಲಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತವೆ,
ಆದರೇನು ಉತ್ತಮ ಸಂಪರ್ಕಕ್ಕೆ ಒಂದು ಒಳ್ಳೆಯ ಮನಸ್ಸು,ಉತ್ತಮ ವಿಚಾರ ಧಾರೆ, ಆತ್ಮೀಯತೆ, ತಿಳಿ ಹಾಸ್ಯ ಕೂಡ ಅಷ್ಟೇ ಮುಖ್ಯ ಅಲ್ಲವೆ?


ಗಾಯತ್ರಿ ಸುಂಕದ

About The Author

1 thought on “́”ಸಂಬಂಧಗಳನ್ನು ಬೆಸೆಯುವ ಸಂಪರ್ಕ ಮಾಧ್ಯಮಗಳು”̲ವಿಶ್ವ ದೂರ ಸಂಪರ್ಕ ದಿನದ ಅಂಗವಾಗಿ ಒಂದು ಬರಹ-ಗಾಯತ್ರಿ ಸುಂಕದ ಅವರಿಂದ”

Leave a Reply

You cannot copy content of this page

Scroll to Top