ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅತ್ತ ಗಡಿಯಲ್ಲಿ ಗುಂಡಿನ ಮಳೆ
ಇತ್ತ ಬಿಸಿಲಲ್ಲಿ ಬೆಂದ ಇಳೆ
ಮುಂಗಾರಿನ ಮಳೆಗೆ
ಮುಖ ಮಾಡಿಹನು ರೈತ
ಜಗದ ಭಾರ ಎಳೆಯುತ್ತಿದೆ ರೈತನ ನೊಗ !

ಅತ್ತ ವೈರಿಯ ವಕ್ರನೋಟ
ಇತ್ತ ಪ್ರಕೃತಿಯ ಚದುರಂಗದಾಟ
ಗಡಿಯಲ್ಲಿ ಅಡಿ ಅಡಿಯೂ ಕಣ್ಗಾವಲು ಯೋಧ,
ಮಣ್ಣಿನ ಕಣ ಕಣವೂ ಅಣಿಯಾಗಿಸುವ ರೈತ
ಜಗದ ಭಾರ ಎಳೆಯುತ್ತಿದೆ ರೈತನ ನೊಗ !

ಅಂತರಿಕ್ಷದ ಅಂತರ, ಸಾಗರದ ಆಳ
ಅಳೆಯುವ ನಾವು
ಮಣ್ಣಿನ ಮೌನ, ರೈತನ ಅಂತರಾಳ ಅರಿಯದಾದೇವು
ಜಗದ ಭಾರ ಎಳೆಯುತ್ತಿದೆ ರೈತನ ನೊಗ !

ಮಂತ್ರದಿಂದ ತಂತ್ರದೆಡೆಗೆ
ತಂತ್ರದಿಂದ ಕುತಂತ್ರದೆಡೆಗೆ
ಸಾಗುತಿದೆ ಈ ಜಗ,
ರೈತ ಮಣ್ಣಿನ ನೈಜ ಮಗ
ಜಗದ ಭಾರ ಎಳೆಯುತ್ತಿದೆ ರೈತನ ನೊಗ !

ಅರಸನ ಆಜ್ಞೆಗೆ ಕಾದ ಯೋಧ
ವೈರಿಯ ಎದೆ ಸೀಳಿಹನು, ದೇಶ ಕಾಯ್ದನು
ಮುಂಗಾರಿನ ದಾರಿ ಕಾಯುತಿಹನು ರೈತ
ಜಗದ ಹಸಿವು ನೀಗಲು,
ಜಗದ ಭಾರ ಎಳೆಯುತಿದೆ ರೈತನ ನೊಗ !!


About The Author

1 thought on “ರೈತನ ನೊಗ •••ರಾಜು ಪವಾರ್‌ ಕವಿತೆ”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ರೈತರ ಮತ್ತು ಯೋಧನ ಹೋಲಿಕೆಯ ಕವಿತೆ ಚೆನ್ನಾಗಿದೆ

Leave a Reply

You cannot copy content of this page

Scroll to Top