ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನ ಸೃಷ್ಟಿ ಕರ್ತ ದೇವರಾದರೂ
ತನ್ನ ಉಸಿರು ಕೊಟ್ಟು ಹೆತ್ತವಳು
ಈ ಭೂಮಿಗೆ ಹೊತ್ತು ತಂದವಳು
ಅವಳೇ ನನ್ನಮ್ಮ ನನ್ನ ಹೆತ್ತಮ್ಮ

ನವಮಾಸ ತನ್ನ ಒಡಲಲ್ಲೇ ಇಟ್ಟು
ಭಾರವೆನಿಸದೆ ಪೋಷಿಸಿ ಹೆತ್ತವಳು
ತನ್ನೆದೆಯ ಹಾಲುಣಿಸಿ ಓಲೈಸಿದ
ಅವಳೇ ನನ್ನಮ್ಮ ನನ್ನ ಹೆತ್ತಮ್ಮ

ತನ್ನ ಮಡಿಲಲ್ಲಿಟ್ಟು ಪಾಲಿಸಿದಳು
ಅತ್ತಾಗ ಎದೆಗೊತ್ತಿ ಸಂತೈಸುವಳು
ನನ್ನ ನೊವಿಗೆ ಅವಳು ಅಳುವಳು
ಅವಳೇ ನನ್ನಮ್ಮ ನನ್ನ ಹೆತ್ತಮ್ಮ

ನಕ್ಕರೆ ನಗಿಸತ್ತಾ ಅತ್ತರೆ ಆಳುವಳು
ಲಾಲಿ ಹಾಡಿ ತೂಗಿ ಮಲಗಿಸುವಳು
ಅಮ್ಮಅನ್ನೋ ಕೂಗಿಗೆ ಓಡಿಬರುವ
ಅವಳೇ ನನ್ನಮ್ಮ ನನ್ನ ಹೆತ್ತಮ್ಮ

ಅಮ್ಮ ಅನ್ನುವುದೇ ಮೊದಲ ನುಡಿ
ನನ್ನ ತೊದಲು ಮಾತನ್ನು ತಿದ್ದಿ ತೀಡಿ
ಮೊದಲು ಪಾಠ ಕಲಿಸಿದ ಗುರುವೇ
ಅವಳೇ ನನ್ನಮ್ಮ ನನ್ನ ಹೆತ್ತಮ್ಮ

ಧರಣಿಯಂತೆ ಸಹನೆ ಇದ್ದಳವಳು
ಅಂಬರದಂತೆ ಆದರಿಸುವವಳು
ಕಡಲಂತೆ ವಿಶಾಲ ಹೃದಯದವಳು
ಅವಳೇ ನನ್ನಮ್ಮ ನನ್ನ ಹೆತ್ತಮ್ಮ


About The Author

1 thought on “ನನ್ನ ಹೆತ್ತಮ್ಮ ಕವಿತೆ-ಗೀತಾ ಆರ್.”

Leave a Reply

You cannot copy content of this page

Scroll to Top