ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಮಹಿಳೆ.   ಕುಟುಂಬದ ಕಣ್ಣು, ಒಂದು ಕುಟುಂಬ ಪ್ರಗತಿ ಹೊಂದ ಬೇಕಾದರೆ ಮಹಿಳೆಯ ಕೊಡುಗೆಯೂ ಸಾಕಷ್ಟಿದೆ.
ಆದರೆ  ಮಹಿಳೆಯ ಸಬಲೀಕರಣ, ಸ್ವಾತಂತ್ರ್ಯ ದ ಬಗ್ಗೆ ಮಾತನಾಡುವ ನಾವು ಅವಳ ಆರೋಗ್ಯದ ಬಗ್ಗೆ ತಲೆ  ಕೆಡಿಸಿೊಳ್ಳುವುದಿಲ್ಲ .
ಕುಟುಂಬದ ನಿರ್ವಹಣೆಯಲ್ಲಿ ತನ್ನನ್ನು ತೊಡಗಿಸಿ ಕೊಳ್ಳುವ ಮಹಿಳೆ ತನ್ನ ಆರೋಗ್ಯದ  ಬಗ್ಗೆ ಡೊಂಟ್ ಕೇರ್ ಆಗಿ ಬಿಡುತ್ತಾಳೆ.
ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಮನೆಯವರ ಚಾಕರಿ ಮಾಡುವ ಮಹಿಳೆ  ತನಗೆ ಗೊತ್ತಿದ್ದ ಮನೆ ಮದ್ದು ಉಪಯೋಗಿಸಿ ಕೆಲಸದ ಒತ್ತಡದಿಂದಾಗಿ ಆಸ್ಪತ್ರೆಯ ಸಹವಾಸ ಕಡಿಮೆ ಎಂದು ಹೇಳ ಬಹುದು.
ಉದ್ಯೋಗಸ್ಥ ಮಹಿಳೆ  ಆದರಂತೂ ಮುಗಿಯಿತು. ಗೊತ್ತಿದ್ದ ಮಾತ್ರೆ ನುಂಗಿ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತಾಳೆ. ಅವಳಿಗೆ ತಾನು ಹಾಸಿಗೆ ಹಿಡಿದರೆ ಮನೆಯ ಗತಿಯೇನು ಎಂದು ಚಿಂತೆ ಮಾಡುತ್ತಾ ತನ್ನ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಆದರೆ ಮಹಿಳೆ ಅವಿಭಕ್ತ ಕುಟುಂಬದಲ್ಲಿ ಇದ್ದರೆ ಮುಗಿಯಿತು, ಚಿಕ್ಕ ಚಿಕ್ಕ ತಪ್ಪುಗಳಿಗೂ ಬೈಯಿಸಿಕೊಂಡು, ಅಪರಾಧಿ ಸ್ಥಾನದಲ್ಲಿ ನಿಲ್ಲುವ ಕರ್ಮ ಅವಳಿಗೆ.

ಒರೆಗಿತ್ತಿಯರು ಹೋಗಿ ವಾರ್ಗಿತ್ತಿಯರಾದರೆ, ಅವಳು ಮನೆ ಮತ್ತು ಕೆಲಸದಲ್ಲಿ ಹೆಣಗಾಡಿ  ಸೋತು ಸುಣ್ಣ  ಆಗುತ್ತಾಳೆ.ಕೀಳರಿಮೆ, ಬೆನ್ನ ಹಿಂದೆ ಆಡಿ ಕೊಳ್ಳುವರ ಕೈಯಲ್ಲಿ ಸಿಕ್ಕಿ ಮಾನಸಿಕ ಆರೋಗ್ಯ ಕೆಡಿಸಿ ಕೊಂಡು ಬಿಟ್ಟಿರುತ್ತಾಳೆ.
ಒಂದು ಕುಟುಂಬದ  ಜವಾಬ್ದಾರಿ ಹೊರುವ ಮಹಿಳೆಯ ಆರೋಗ್ಯದ ಬಗ್ಗೆ ಕುಟುಂಬದ ಸದಸ್ಯರು ಗಮನ ಕೊಡಬೇಕು..  ದಿನದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ, ಬಿಸಿ ಬಿಸಿ ಆಹಾರ,  ಹೊತ್ತಿಗೆ ಸರಿಯಾಗಿ ಆರೈಕೆ, ಒಂದಿಷ್ಟು ನಗು, ಸಹಾನುಭೂತಿ , ಕೆಲಸದಲ್ಲಿ ಸಹಾಯ, ಮೆಚ್ಚುಗೆ ಸಿಕ್ಕರೆ ಮಹಿಳೆಗೆ  ಉತ್ತಮ  ದೈಹಿಕ ಮತ್ತು ಮಾನಸಿಕ ಆರೋಗ್ಯ ಸಿಕ್ಕರೆ ಸ್ವರ್ಗಕ್ಕೆ ಮೂರೇ ಮೆಟ್ಟಿಲು ಅಲ್ಲವೇ?


About The Author

Leave a Reply

You cannot copy content of this page

Scroll to Top