ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಮಲೆನಾಡಿನ ರಮ್ಯ ತಾಣ ಬಳ್ಳಿಗಾವಿಯ ಸುಜ್ಞಾನಿ ನಿರಹಂಕಾರ ದಂಪತಿಗಳ ತೇಜೋಮಯ ತನಯ
ಅನುಭಾವಿಗಳ ನುಡಿಯಲ್ಲಿರುವ ಘನ ಮಹಿಮ
ಚಿತ್ಕಳೆಯ ಚಿದ್ಬಿಂದುವಾದ ಅಪ್ರತಿಮ
ಮದ್ದಳೆಯ ಮಾಯಾವಿ
ತನ್ನ ತಾ ಅರಿಯೆಂದ ಅನುಭಾವಿ
ಶಿವತತ್ವ ಶಿವಜ್ಞಾನ ಮೋಕ್ಷ
ಶೂನ್ಯ ಪೀಠಾಧ್ಯಕ್ಷ
ಅನಿಮಿಷರಿಂದ ಪಡೆದರೂ ಲಿಂಗದೀಕ್ಷೆ
ನಿರಾಕಾರ ನಿಲುವೇ ನಿನಗೆ ಶ್ರೀರಕ್ಷೆ
ಗೊಗ್ಗಯ್ಯನಿಗೆ ಭಕ್ತಿ ಮಾರ್ಗ
ಮುಕ್ತಾಯಕ್ಕನಿಗೆ ಮುಕ್ತಿ ಮಾರ್ಗ ತೋರಿದೆ
ವಿಶ್ವ ಜ್ಞಾನವ ಹಿಡಿದ ಹಠಯೋಗಿ
ಭಾವಲಿಂಗ ಚಿಂತನೆಯ ಭಕ್ತಿ ಮಾರ್ಗಿ
ಮಹಾದೇವಿಗೆ ಗುರುವಾಗಿ ಸಿದ್ದರಾಮನಿಗೆ ಅಹಂಕಾರ ಮಾಯವಾಗಿ
ಆತ್ಮಜ್ಞಾನ ದೀವಿಗೆ ಬೆಳಗಿದ ಮಹಾಯೋಗಿ
ನೀನೆಂದರೆ ಬೆರಗು ಬೆಡಗಿನ ಬೆಳಗು
ಕಾಮಲತೆಯ ಮಾನಸಿಕ ಪತಿ
ಅನುಭವ ಮಂಟಪದ ಪೀಠಾಧಿಪತಿ
ಅವಿಶ್ರಾಂತ ಅಲೆಮಾರಿ ವಚನ ಕ್ರಾಂತಿಯ ರೂವಾರಿ
ಆಧ್ಯಾತ್ಮದ ಸಿಡಿಲೇ ಗುಹೇಶ್ವರ ಅಂಕಿತದ ನಿರ್ಮಾಯೆ
ನಿಮ್ಮನರಿಯಲು ಸಾಕೇ ಹರಿಹರನ ರಗಳೇ
ಚಾಮರಸನ ಪ್ರಭುಲಿಂಗಲೀಲೆ….

About The Author

1 thought on “ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಅಲ್ಲಮ…..”

  1. ಅಲ್ಲಮರ ಜೀವನ ಹಾಗೂ ವ್ಯಕ್ತಿತ್ವ, ಸಾಧನೆಗಳ ಕುರಿತು ಕವನ ಸುಂದರವಾಗಿ ಮೂಡಿಬಂದಿದೆ.

Leave a Reply

You cannot copy content of this page

Scroll to Top