ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಜನರನರಿಯದರಿವು‌ ಮನವ ಒಂಟಿಯಾಗಿಸಿಡುವುದು
ಕನಸನರಿಯದರಿವು‌ ಮನಕೆ
ಆಸೆ ಧರಿಸಿ ಅಳುವುದು

ತನ್ನ ತಾನು ನೋಡದೇನೆ
ಇತರರನ್ನು ಜರಿವುದು
ಯಾರಿಗ್ಯಾರು ಆಗರೆನುತ
ಇರುವುದನ್ನೇ ಮರೆವುದು

ಜಗದ ನಿಯಮ ತಿಳಿಯದಿನಿತು
ಜತನದಿಂದ ಸರಿಯುವುದು
ತನ್ನಡೆನುಡಿಯದು ತನ್ನೆ ಮಥಿಸಿ ಮದಿಸಲಿಳಿವುದದನೆ ಅರಿಯದು

ಆನಂದದ(ಹ)ರಿವುತನ್ನೊಳಗಿಹು
ದೆನುವ ಸುಜ್ಞಾನವನು ಕಾಣದು
ಒಡಲ‌ ಆಲಸ(ಆಲಸ್ಯ)ರಿಯದ
ಅಹಂ ಜೀವನಳಿಸಲಿಳಿವುದು

ತಾಳ್ಮೆ ಇರದ ಅರಿವಿನಾಟ
ತನುಮನವದೇ ಗ್ರಹಿಸದು
ಶಾಂತ ಹರಿತ ಅರಿವಿ(ಜ್ಞಾನ)ನಲೇ
ಸರ್ವರಿಗಿಹುದು ಸುಂದರ ಬಾಳದು


About The Author

Leave a Reply

You cannot copy content of this page

Scroll to Top