ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಡಿಸೆಂಬರ್ 31
ಬಂತೆಂದರೆ ಜನರಿಗೆ
ಎಲ್ಲಿಲ್ಲದ ಖುಷಿ ಪ್ರೀತಿ
ಗೆಳೆಯ ಗೆಳತಿಯರ ಸಂಗಮ
ಸಂಜೆಯಾದರೆ ಸಾಕು
ಗುಂಡು ಹಾಕಲು ಸಿದ್ಧ
ಡಿಜೆ ಕರ್ಕಶ ಸಪ್ಪಳ
ಸಂಗೀತ ವಾದ್ಯ ಕುಣಿತ
ಕಂಠಪೂರ್ತಿ ಕುಡಿತ
ದಾರಿಯುದ್ದಕ್ಕೂ ವಾಂತಿ ಓಕಳಿ
ಗಂಡು ಹೆಣ್ಣು ಭೇದವಿಲ್ಲ
ಹುಚ್ಚೆದ್ದು ಕುಣಿವರು .
ರಾತ್ರಿ ಹನ್ನೆರಡು
ಕೂಗುತ್ತಾರೆ ಹೊಸ ವರುಷಕೆ
ಯಾರಾಬಿರ್ರಿ ಗಾಡಿ ಚಾಲನೆ
ಕಂಬಕ್ಕೋ ಮರಕ್ಕೋ ಅಪಘಾತ
ಪೋಲೀಸರ ಪಂಚನಾಮಿ
ಪತ್ರಿಕೆಯಲ್ಲಿ ಸುದ್ಧಿ
ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್
ನಶೆ ಉನ್ಮಾದ ಉತ್ಸಾಹ
ಕಳಚಿದ ಭ್ರಮೆ ಬ್ರಾಂತಿ
ಆಸ್ಪತ್ರೆಯಲೀಗ ಶಾಂತಿ .
ಕೈಯೋ ಕಾಲೋ ಮುರಿತ
ಬುದ್ಧಿ ಬರುವದಿಲ್ಲ ನಮ್ಮವರಿಗೆ
ಡಿಸೆಂಬರ್ 31
ಬಂತೆಂದರೆ ಜನರಿಗೆ
ಎಲ್ಲಿಲ್ಲದ ಖುಷಿ ಪ್ರೀತಿ

ಗೆಳೆಯ ಗೆಳತಿಯರ ಸಂಗಮ .


About The Author

3 thoughts on “ಹೊಸ ವರ್ಷದ ವಿಶೇಷ-2025, ಕವಿತೆ-ಡಿಸೆಂಬರ್ 31”

  1. ಹೊಸ ವರ್ಷದ ಆಚರಣೆಯ ಕಟು ಸತ್ಯ ದ ಕವನ ಎಲ್ಲರೂ ವಿಚಾರ ಮಾಡಲೇಬೇಕಾದ ವಿಷಯ…

    ಸುತೇಜ

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ವಾಸ್ತವವನ್ನು ತೆರೆದಿಟ್ಟ ಕವನ ಅವರವರ ಭಾವಕ್ಕೆ ತಕ್ಕಂತೆ.,..,….

  3. ಸತ್ಯವನ್ನು ಬಿಂಬಿಸುವ ಅದ್ಭುತ ಕವನ
    ಎಲ್ಲರೂ ಎಚ್ಚರಗೊಳ್ಳಬೇಕು

    ಅಕ್ಕಮಹಾದೇವಿ

Leave a Reply

You cannot copy content of this page

Scroll to Top