ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಾನು ನಕ್ಕು ಪರರನ್ನೂ ನಗಿಸಿದವರು ಡಾ.ಸಿದ್ಧರಾಮ ಹೊನ್ಕಲ್
ಬಿಕ್ಕುಗಳ ಒಳಗೊಳಗೇ ಅಡಗಿಸಿದವರು ಡಾ.ಸಿದ್ಧರಾಮ ಹೊನ್ಕಲ್

ಒಡಹುಟ್ಟಿದವರ ಏಳಿಗೆಗೆ ಅಹರ್ನಿಶಿ ದುಡಿದ ಯಜಮಾನ ಇವರು
ಬದ್ಧತೆ ಕಾರ್ಯಕ್ಷಮತೆಗೆ ಹೆಸರಾದವರು ಡಾ.ಸಿದ್ಧರಾಮ ಹೊನ್ಕಲ್

‘ ನಾ ಎಲ್ಲ ಮಾಡಿದೆ ‘ ನೆಂಬ ಅಹಮ್ಮಿಕೆಯ ಎಂದೂ ತೋರಲೇ ಇಲ್ಲ
ಕಿರಿಯರ ಹಾದಿಗೆ ಕೈ ಮರವಾದವರು ಡಾ.ಸಿದ್ಧರಾಮ ಹೊನ್ಕಲ್

ಪ್ರಿಯ ಪತ್ನಿಯ ಒಳಿತಿಗಾಗಿ ಎಲ್ಲವನ್ನೂ ಮೀಸಲಿಟ್ಟ ಜೀವವಿದು
ಮಕ್ಕಳ ಭವಿತವ್ಯಕೆ ನಿತ್ಯ ಶ್ರಮಿಸಿದವರು ಡಾ.ಸಿದ್ಧರಾಮ ಹೊನ್ಕಲ್

ಅರವತ್ತೆಂಟು ಕೃತಿಗಳ ರಚನೆ ಅಸಂಖ್ಯ ಸನ್ಮಾನ ಪುರಸ್ಕಾರಗಳು
ಸಾಹಿತ್ಯ ಕ್ಷೇತ್ರದ ದೈತ್ಯ ಪ್ರತಿಭೆಯಾದವರು ಡಾ.ಸಿದ್ಧರಾಮ ಹೊನ್ಕಲ್

ಕಾಲದೊಡನೆ ದೇಹ ಮಾಗಿದರೂ ಕುಗ್ಗದ ಚೈತನ್ಯ ಇಂದೂ ಇವರಲ್ಲಿ
ನಿರಂತರ ಲೋಕ ಸಂಚಾರಿಯಾದವರು ಡಾ.ಸಿದ್ಧರಾಮ ಹೊನ್ಕಲ್

ಸಾಧಕ ಬಾಧಕಗಳ ಅರಿವಿನಲ್ಲಿ ಸಾಗಿದರು ಸಾಧನೆಯ ಗಮ್ಯದತ್ತ
ಸರಿಸಾಟಿ ಇಲ್ಲವೆಂಬಂತೆ ಸಾಧಕರಾದವರು ಡಾ.ಸಿದ್ಧರಾಮ ಹೊನ್ಕಲ್


About The Author

1 thought on “ಎ. ಹೇಮಗಂಗಾ ಅವರ ಹೊಸ‌ ಗಜಲ್”

  1. ಡಾ. ಸಿದ್ಧರಾಮ ಹೊನ್ಕಲ್ ಅವರ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಿರಿ. ಅವರ ವ್ಯಕ್ತಿತ್ವವನ್ನು ಗಜಲ್ ನಲ್ಲಿ ಹೇಳುತ್ತಾ ವಿನೂತನವಾಗಿ ಜನ್ಮದಿನದ ಶುಭಾಶಯ ಕೋರಿದ್ದಿರಿ ಮೇಡಂ

Leave a Reply

You cannot copy content of this page

Scroll to Top