ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೀಪಾವಳಿ ಮುಗಿಸಿ
ಶರದ್ ನಿರ್ಗಮನ,
ಚಳಿಯ ಕರಕೊಂಡು
ಹಿಮವಂತ ಬಂದಾನ.

ಹಿಮದಂತೆ ಕೊರೆವ
ಚಳಿಯ ಎಡವಟ್ಟು,
ಗಾಳೀಲಿ ಚುಚ್ಚಿ ನೋಡು ಸಿಕ್ಕಿಕೊಂಡೀತು! ಬೊಟ್ಟು.

ಜೀವ ಹಿಂಡುವ ಥಂಡಿ
ಸುತ್ತಿರುವ ಹೊತ್ತಿಗೆ
ಮುತ್ತಿನ ಮತ್ತಿನಲಿ
ನಲ್ಲ – ನಲ್ಲೆ ಬೆಚ್ಚಗೆ.

ಚಳಿಯೇ ನಡುಗಿದೆ
ಮಂಜಿನಂಥ ಗಾಳಿಗೆ
ದುಂಬಿ ಮಾತ್ರ ಸಾಗಿದೆ
ಮಧು ಸಂಗ್ರಹಣೆಗೆ.

ಜೋಡಿ ಬಯಸುವದು
ಚಳಿ-ಗಾಳಿಯ ಹೂಟ,
ವಿರಾಗಿಯೂ ಆದಾನು
ಮನದಲ್ಲಿ ಲಂಪಟ.

ಕಟಕಟ ಥಂಡೀಲಿ
ಪರಸ್ಪರ ವಿನಂತಿ
ನೀನೇ ಕಂಬಳಿಯಾಗು
ಹೊದ್ದು ಮೈ ಬೆಚ್ಚಗಾಗು.

———————————————-

About The Author

Leave a Reply

You cannot copy content of this page

Scroll to Top