ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮದಿರೆಯ ಮೋಹವನ್ನು ತೊರೆಸಿದವನು ಗಾಲಿಬ್
ನಿದಿರೆಯ ವ್ಯಾಮೋಹವನ್ನು ಕಸಿದವನು‌ ಗಾಲಿಬ್

ಗಜಲಿನ ಬಂಧದಲಿ ಜಗವನೇ ಅವ ತೇಲಿಸಿದನು ಸತತ
ತನ್ನ ಜೀವವನೇ ಗಂಧ ವಾಗಿ ಉರಿಸಿದವನು‌‌ ಗಾಲಿಬ್

ಕಾವ್ಯ ಮತ್ತು‌ಪ್ರೇಮ ಎರಡೂ ಬೇರಲ್ಲವೆಂದುಲಿದವನು
ಪ್ರಾಮಾಣಿಕತೆಯ ಪ್ರೇಮದಲಿ‌ ಮೆರೆಸಿದವನು ಗಾಲಿಬ್

ಸುಳ್ಳಿನ ದಾರಿಗಳ ಹಂಗುಗಳ ನಿರಾಕರಿಸಲು ಕಲಿಸಿದನು
ನಿಜದಗ್ನಿದಿವ್ಯದ ಮಾರ್ಗದಲಿ ನಡೆ‌ ಕಲಿಸಿದವನು‌ ಗಾಲಿಬ್

ಕಾವ್ಯದಲೆ ಜಗವ ಸೋಲಿಸಬಹುದೆಂದು ಕಲಿಸಿದ ಜೋಗಿ
ವ್ಯರ್ಥಕಗ್ಗದದಾರಿ ಸಗ್ಗದ ದಾರಿಯಲಿ‌ ಇರಿಸಿದವನು ಗಾಲಿಬ್


About The Author

1 thought on “ಗಾಲಿಬ್‌ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ”

Leave a Reply

You cannot copy content of this page

Scroll to Top