ಮಾಜಾನ್ ಮಸ್ಕಿ ಅವರ ಗಜಲ್

ಒಲುಮೆಗೆ ಒಲವು ಬೆಸೆಯದವನಿಗೆ ಏನೆಂದು ಕರೆಯಲಿ
ಸೇರದೆ ಕವಲು ದಾರಿ ಹುಡುಕುವನಿಗೆ ಏನೆಂದು ಕರೆಯಲಿ

ದುಂಬಿಯ ಸಂಗ ಮಧುರ ಮಧುಪಾನ ಎಂದು ಮಿಂದೆ
ಸದಾ ಮೋಹಕ ವಿಷವನ್ನೇ ಹರವುವನಿಗೆ ಏನೆಂದು ಕರೆಯಲಿ

ಭೂಮಿಯು ಸುಡುಬಿಸಿಲ ಕೆಂಡಾಗ್ನಿಯಲ್ಲಿ ಸುಡುತ್ತಿದೆ
ತಂಪಿನ ತಂಗಾಳಿ ಬಯಸುವನಿಗೆ ಏನೆಂದು ಕರೆಯಲಿ

ಮೈ ಮರೆಸುವ ಹೊಗಳಿಕೆಯ ಮಾತುಗಳ ಸುರಿಮಳೆ
ಕಪಟ ನಾಟಕಡಿ ನಟಿಸುವನಿಗೆ ಏನೆಂದು ಕರೆಯಲಿ

ನಂಬಿದವರೆಲ್ಲಾ ಬೆನ್ನ ಹಿಂದೆ ಚೂರಿ ಇರಿಯುತ್ತಿರುವರು
ಮಾಜಾಳ ರಕುತ ಬಾಚಿ ಚಿತ್ರಿಸುವನಿಗೆ ಏನೆಂದು ಕರೆಯಲಿ


About The Author


Comments

Leave a Reply

You cannot copy content of this page