ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾರು ಯಾರದೋ ಬಿಡೆಗೆ ಒಳಗಾಗಿ
ಸಿಕ್ಕು ಬದುಕುವವಳು ಅವಳು
ಹೆಣ್ಣಿನಸ್ತತ್ವದ ಅರಿವಿಗೆ ಒಳಗಾಗದೆ
ಅವಳ ಅಸ್ತಿತ್ವಕ್ಕೆ ಕಿಚ್ಚನ್ನಿಟ್ಟವಳು!
ಅವಳೆದೆಯಲಿ ಚಿಗುರುವ ಕನಸುಗಳಿಗೆ
ತ್ಯಾಗದ ಕವಚ ತೊಡಿಸಿ
ಬೋರಲಾಗಿ ನೆನಪಿನ ಹಂದರಕೆ
ಕಣ್ಣೀರಿನ ಆಸರೆ ನೀಡಿದವಳು!
ಸ್ವಂತಿಕೆಯ ಮಾರಿ ತನ್ನ –
ಕನಸುಗಳಿಗೆ ಮುಳ್ಳನ್ನಿಟ್ಟು
ಇತಿಹಾಸದ ಮಹಾನ್
ಮಹಿಳೆಯರ ಪುಸ್ತಕಗಳನ್ನೋದುತ್ತ
ತಲೆದಿಂಬಿನಡಿಯಲ್ಲೇ
ಕನಸುಗಳ ಚಿವುಟಿ, ಬೆಳಗೆದ್ದು
ಯಾರದೋ ಬಿಡೆಗೆ ಹಿಡಿಯಾಗಿ
ಜೀವನ ಸವೆಸುವಳು!
ಬೇಕೆಂದು ಪಟ್ಟು ಹಿಡಿವ
ಗಟ್ಟಿಗಿತ್ತಿ ಸ್ತ್ರೀವಾದಿಯಲ್ಲವಳು!
ಎದೆಯ ಗೂಡಿನಲಿ ಮನೆಮಾಡಿದ
ಬಯಕೆಗಳಿಗೆ ಬಾಗಿಲನಿಕ್ಕಿದವಳು!
ಯಾರದೋ ಬಿಡೆಗೆ ಒಳಗಾಗಿ
ತನ್ನ ಕನಸುಗಳಿಗೆ ಮುಳ್ಳನ್ನಿಟ್ಟವಳು!


About The Author

1 thought on “ಶಾರದಾ ಶ್ರಾವಣಸಿಂಗ್ ರಜಪೂತ ಅವರ ಕವಿತೆ-ಕನಸುಗಳಿಗೆ ಮುಳ್ಳನ್ನಿಟ್ಟವಳು!”

Leave a Reply

You cannot copy content of this page

Scroll to Top