ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹುಟ್ಟಿದೊಡನೆ
ಹೇಳಿ ಕೊಡದ ಪಾಠ
“ಅಮ್ಮ” ಎನ್ನೋದು.
**
ತೊದಲ ನುಡಿ
ಗೃಹ ಕಲಾವಿದನ
ಇಂಪಾದ ಗಾನ.
*
“ರಚ್ಚೆ” ನಾಟಕ,
ಹೆತ್ತಮ್ಮನ ಮಡಿಲು
ಸಿಕ್ಕರೆ ಸಾಕು.
**
ಮನೆಯ ತುಂಬಾ
ಮಕ್ಕಳ ಕಲರವ
ಇಂಪಾದ ಗಾನ.

ಕಂದನ ಅಳು
ಮಧುರ ಸಂಗೀತವು
ಹೆತ್ತ ತಾಯಿಗೆ.
**
ಮಗು ನಕ್ಕಾಗ
ಸುಗಂಧ ಪರಿಮಳ
ಘ್ರಾಣಿಸಿದಂತೆ.


About The Author

Leave a Reply

You cannot copy content of this page

Scroll to Top