ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಡದ ಮಣ್ಣಿನಲಿ ಮೂಡಿತೊಂದು ಕಿರಣ
ಬೀರಪ್ಪ ಬಚ್ಚಮ್ಮ ದಂಪತಿಗಳ ಅರುಣ
ತಿರುಪತಿ ತಿಮ್ಮಪ್ಪನಿಂದಾಯ್ತು ಕರುಣ
ಕಂದನವ ಮೂಡಿದನು ಮುಂದಾದ ಶರಣ

ಕಲೆ ಶಾಸ್ತ್ರ ಪುರಾಣಕಾವ್ಯಗಳನು‌ ಕಲಿತ
ಶಶ್ತ್ರಾಸ್ತ್ರ ವಿದ್ಯೆಯಲು ಅವನಾದ ಪಾರಂಗತ
ಬಾಡ ಪ್ರಾಂತಕ್ಕ ಅಧಿಪತಿಯವನು ಆದಾತ
ಕನಕನಾಯಕನೆನೆಸಿದನು ಜನರಲ್ಲಿ ಸಂಪ್ರೀತ

ಯುದ್ಧದಲಿ ಅವನಿಗಾಯ್ತೊಮ್ಮೆ ಸೋಲು
ಸಂಸಾರದಲು ಎರಗಿದವು ದುಃಖದ ಸಾಲು
ಕರೆಯಿತು ಕೈಮಾಡಿ ಉಡುಪಿಕೃಷ್ಣನ ಕೊಳಲು
ಹರಿನಾಮ ಸ್ಮರಣೆಯೆ ಅಂದಿನಿಂದವನ ಪಾಲು

ದೊರಕಿತು ಉಡುಪಿಯಲಿ ವ್ಯಾಸರ ಕರುಣೆ
ಸುತ್ತೆಲ್ಲ ಅವನ ಕಾಡಿದರು ಬಿಡಲಿಲ್ಲ ಸಹನೆ
ತೋರಿದನು ಭಕ್ತಿ ಮಾಡಿದಹರಿನಾಮ ಸ್ಮರಣೆ
ಗುರುಗಳು ಹೊಗಳಿದರು ಕನಕರಿಗಿಲ್ಲ ಎಣೆ

ಬರೆದ ನೂರಾರು ಕೀರ್ತನೆ ನಾಲ್ಕು ಕಾವ್ಯಗಳ
ಭಕ್ತಿಯಲಿ ಮಿಂದಿತ್ತು ಸುತ್ತ ಗಣ ಮೇಳ
ಕನಕನಾದನು ಜಗಕೆ ಆರಾಧ್ಯ ದಂಡಿಗೆ ತಾಳ
ತೋರಿದನು ಜಗಕೆಲ್ಲ ಭಕ್ತಿ ಶಕ್ತಿ ಸಂಮೇಳ

ಕನಕನೆಂದರೆ ಬಂಗಾರ ಆದರೂ ಅವನಲ್ಲ ಲೋಹ
ಕುಲದ ನೆಲೆಯನು ಹರಿಯಿರಿ ಎಂದ ಭಕ್ತನವ
ಕಾಗಿನೆಲೆಯ ಕೇಶವನಹೃದಯಕೆ ಹತ್ತಿರವೆ ಇದ್ದವ
ಬಣ್ಣನೆಗೆ ಮೀರಿದ ಸಂತನು ನಮ್ಮನವ ಕಾಯ್ವ


About The Author

1 thought on “ಡಾ.ವೈ.ಎಂ.ಯಾಕೊಳ್ಳಿ-ಕನಕ ಸ್ಮರಣೆ”

Leave a Reply

You cannot copy content of this page

Scroll to Top