ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

[ನಡೆಯದೆ ಅಡಿಗಡಿಗೆ
ಬೆವರುತ್ತಿದೆ ಭಾಷೆ
ಗಡಿಗಳಲಿ
ಪ್ರತಿಷ್ಠಾಪನೆಯಾಗಲಿ ಕನ್ನಡ

ಓಡದೆ ಅಡಿಗಡಿಗೆ
ಬಸವಳಿಯುತ್ತಿದೆ ಭಾಷೆ
ನಡುನಾಡುಗಳಲಿ
ಪ್ರತಿಷ್ಠೆಯಾಗಲಿ ಕನ್ನಡ

ಒಳಗೊಳಗೆ ಮಾತೃಭಾಷೆಯ ಹೊಸಕಿ
ಬಂದ ಅತಿಥಿಗಳ ಓಲೈಸಲು
ನಗುಮುಖವಾಡದ ಅವರವರ ಭಾಷೆಯ ಬಳಕೆ
ಕನ್ನಡವ ಶೂಲಕ್ಕೇರಿಸಿ
ಅನ್ಯಭಾಷೆಗಳ ಅಪ್ಪಿಕೊಳ್ಳುವ ವಿಕೃತ ಬಯಕೆ

ಅನ್ನ ನೀರೆರೆದವರೇ ಪರಕೀಯರಾಗಿಹರು
ಅಸ್ತಿತ್ವ ಕಾಪಾಡಿಕೊಳ್ಳೋ ನಿತ್ಯ ಯುದ್ಧ
ಯಾರು ನಮ್ಮವರು ಯಾರು ಪರರು
ತಿಳಿಯದೇ ಸೊರಗಿಹುದು ಕನ್ನಡ ಅರ್ಧಂಬರ್ಧ

ಇದೇ ಸಕಾಲ ನಾಡು ಗಡಿಗಳ ಗಟ್ಟಿಗೊಳಿಸಲು
ಕನ್ನಡದ ಬೇರು ಬಾಹುಳ್ಯ ಬೆಳೆಸಲು
ಉದಾಸೀನತೆಯು ಇನ್ನೆಷ್ಟು ಕಾಲ
ಕನ್ನಡದ ಉಳಿವಿಗೆ ಇಲ್ಲ ಬಹುಕಾಲ
ತೋರಿದರೆ ಪ್ರೀತಿ
ಕನ್ನಡ ಇದ್ದೀತು ಅನುಗಾಲ


About The Author

6 thoughts on “ಕಿರಣ ಗಣಾಚಾರಿ. ಮುತ್ತಿನಪೆಟಗ”

  1. ತುಂಬಾ ಚೆನ್ನಾಗಿ ಮೂಡಿಬಂದಿದೆ ಕನ್ನಡ ಕಳಕಳಿ….ಸರ್

  2. ನಮ್ಮೂರಿನ ಹೆಮ್ಮೆಯ ಸರಸ್ವತಿ ಪುತ್ರ, ಉದಯೋನ್ಮುಖ ಬರಹಗಾರ, ಕವಯಿತ್ರಿ, ಕಿರಣ ಗಣಾಚಾರಿ ಯವರಿಗೆ ಅಭಿವಂದನೆಗಳು. ಇನ್ನಷ್ಟು ಸೊಗಸಾದ ಬರಹಗಳು ನಿಮ್ಮ ಲೇಖನಿಯಿಂದ ಮೂಡಿಬರುತ್ತಿರಲಿ ಎಂದು ಹಾರೈಸುವ ನಿಮ್ಮ ಹಿತೈಷಿ, ರಾಜೇಂದ್ರ ಸಾಣಿಕೊಪ್ಪ. ಇಟಗಿ

  3. ಮುತ್ತಿನ ಪೆಟ್ಟಿಗೆ ಅದ್ಬುತ
    ಜೈ ಕರ್ನಾಟಕ ಜೈ ಕನ್ನಡ.

Leave a Reply

You cannot copy content of this page

Scroll to Top