ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

:ಭಾವ ಸಂಗಮ ಮತ್ತು ಉಮಾಶಂಕರ ಪ್ರತಿಷ್ಠಾನ ಸಹಯೋಗದಲ್ಲಿ 2024 ರ ಅಕ್ಟೋಬರ್ 31 ರಂದು ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಭಾವ ಸಂಗಮ ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.

ಕವನದ ವಿಷಯ: ಕತ್ತಲೆಯಿಂದ ಬೆಳಕಿನೆಡೆಗೆ….
ಕವನಗಳು 20 ಸಾಲುಗಳ ಮಿತಿಯೊಳಗಿರಲಿ‌‌. ಯಾವುದೇ ಬಳಗ, ಸಂಘ, ಸಂಸ್ಥೆಗಳಿಗೆ ಸಂಬಂಧಿಸಿದ್ದರೂ ಆವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆ ಮುಕ್ತವಾದ ಅವಕಾಶ ನೀಡಿದೆ‌. ಒಬ್ಬರು ಒಂದೇ ಕವನ ಕಳಿಸುವುದು. ಕಳಿಸುವ ಮೊದಲೇ ಕವನವನ್ನು ಎರಡು ಮೂರು ಸಲ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಮಾಡಿ ಕಳಿಸಿ‌. ಪದೇ ಪದೇ ತಿದ್ದುಪಡಿ ಮಾಡಿ ಕಳಿಸಬೇಡಿ. ಮೊದಲ ಸಲ ಕಳಿಸಿದ್ದನ್ನೇ ಸ್ಪರ್ಧೆಗೆ ಪರಿಶೀಲಿಸಲಾಗುತ್ತದೆ.

ಕವನವನ್ನು ಅಕ್ಟೋಬರ್ 31 ರಂದು ಸಾಯಂಕಾಲ 4 ರಿಂದ ಸಂಜೆ 9 ರ ಅವಧಿಯೊಳಗೆ ಕಡ್ಡಾಯವಾಗಿ 9591323453 ವಾಟ್ಸಾಪ್ ಗೇ ಕಳಿಸಬೇಕು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಕ್ಟೋಬರ್ 30 ರ ರಾತ್ರಿ 10 ರೊಳಗೆ ತಮ್ಮ ಹೆಸರುಗಳನ್ನು 9591323453 ವಾಟ್ಸಾಪ್ ಗೆ ಕಳಿಸಿ ನೋಂದಾಯಿಸಿಕೊಳ್ಳುವುದು ಕಡ್ಡಾಯ‌. ಫೋನ್ ಕರೆಗೆ ಅವಕಾಶ ಮತ್ತು ಸಮಯವಿಲ್ಲವಾದ್ದರಿಂದ ಈ ಮಾಹಿತಿಯನ್ನೇ ಸರಿಯಾಗಿ ಓದಿಕೊಂಡು ಪರಿಶೀಲಿಸಿ ಕವನ ಕಳಿಸಬೇಕು‌.ತೀರಾ ಅನಿವಾರ್ಯ ಇದ್ದಲ್ಲಿ ವಾಟ್ಸಾಪ್ ಮೆಸೇಜ್ ಮಾಡಬಹುದು.

ಆಯ್ದ ಅತ್ಯುತ್ತಮ ಕವಿತೆಗಳ ಕವಿಗಳಿಗೆ ಭಾವ ಸಂಗಮ ಹನ್ನೊಂದನೇ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಉಮಾಶಂಕರ ಪ್ರತಿಷ್ಠಾನ ಸಹಯೋಗದಲ್ಲಿ ವಿಶೇಷ ಪ್ರತಿಬಿಧಿಗಳನ್ನಾಗಿ ಆಯ್ಕೆ ಮಾಡಲಾಗುವುದು. ಅಭಿನಂದನ ಪತ್ರದೊಂದಿಗೆ ತಲಾ ಐದು ಗ್ರಂಥಗಳ ಉಡುಗೊರೆ ಸಮರ್ಪಿಸಲಾಗುವುದು‌ ಎಂದು ಭಾವ ಸಂಗಮ ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ‌.
[5:13 pm, 29/10/2024] ರಾಜೇಂದ್ರ ಪಾಟೀಲ, ಹುಬ್ಬಳ್ಳಿ: ದಯವಿಟ್ಟು ಸಂಗಾತಿ ಬ್ಲಾಗ್ ನಲ್ಲಿ ಪ್ರಕಟಿಸಿ, ಹೆಚ್ಚಿನ ಆಸಕ್ತರಿಗೆ ತಲುಪಿಸಲು ಕೋರಿಕೆ.


About The Author

Leave a Reply

You cannot copy content of this page

Scroll to Top