ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವೀಕರಿಸು ನನ್ನನ್ನು
ಇರುವಂತೆ ನಾನು||
ಹಮ್ಮು ಬಿಮ್ಮಿಲ್ಲದೆ
ಒಪ್ಪಿಕೋ ನೀನು||

ನೀ ಎನ್ನ ಹೃದಯದಲಿ
ಅಚ್ಚೊತ್ತಿ ಕುಳಿತವನು||
ನಿನ್ನನ್ನು ಆದರಿಸಿ
ಜೊತೆಯಲೆ ನಡೆದಿಹೆನು||

ಹಿತ್ತಾಳೆ ಕಿವಿಯಾಗಿ
ತಮಸ್ಸಿಗೆ ಜಾರದಿರು||
ಇದ್ದರೂ ಹತ್ತಿರವೇ
ದೂರ ನೀ ಉಳಿಯದಿರು||

ಮೇಲ್ನೋಟಕೆ ಅನಿಸುವ
ಭಾವನೆಯ ಬಂಧಿಸು||
ನಿನ್ನೆದೆಯ ತೆರೆದು
ಮೆಲು ನುಡಿದು ರಮಿಸು||

ನಾ ನಿನ್ನ ಪುರಾಷಾರ್ಥ
ಸಾಧನೆಯ ಗೆಳತಿ||
ಹೆಮ್ಮೆ ಪಡುವ ನಿನ್ನ
ವಂಶಕುಡಿಗೆ ಒಡತಿ||

ನಿತ್ಯ ಬೇಯ್ವ ನನ ಮನಕು
ಪ್ರೀತಿಯನು ಸಿಂಪಡಿಸು||
ನಂಬಿಕೆಯ ಉಣಬಡಿಸಿ
ಸಾಂಗತ್ಯ ಸೊಗಯಿಸು ||


About The Author

Leave a Reply

You cannot copy content of this page

Scroll to Top