ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೂರದ ಅರ್ಥವ ಬಲ್ಲೆನು
ಸಹಿಸಲಾರೆನು ಅಗಲಿಕೆ
ಆಗುವುದು ಚಡಪಡಿಕೆ
ನೀನಿದ್ದರೆ ಚೇತರಿಕೆ
ಉಸಿರು ನೀ../

ಬೆರೆತು ಬಾಳುವ
ಅರಿತು ನಡೆಯುವ
ಪ್ರತಿಕ್ಷಣವೂ ಖುಷಿ
ಜೀವನವೇ ಮಧುರ
ಅನುಬಂಧ ಅಮರ..

ಕುಡಿನೋಟದ ನೆನಪು
ಬಾಳೆಲ್ಲ ಹೊಳಪು
ಮರೆಯಲಾಗದ
ಸವಿಘಳಿಗೆಯು../

ಒಲವಿನ ಮಾತುಗಳು
ಒಲೈಸುವ ನಿಮಿಷಗಳು
ಸುಂದರ ಕ್ಷಣಗಳು
ಕಾದಿರುವ ಹರುಷವು../

ನೀನಿದ್ದರೆ ಎಲ್ಲ
ಮನಸ್ಸಭಾವನೆ ಬಲ್ಲ
ಪ್ರೀತಿಯ ಗೆಲುವೇ
ಮನದ ಒಲುಮೆಯು../

About The Author

Leave a Reply

You cannot copy content of this page

Scroll to Top