ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಿಹಿ ನೆನಪುಗಳ
ಹೊಸ ಹುರುಪುಗಳ
ಸಂತಸದ ಮುಗಿಲ
ಬಾಗಿಲುಗಳು||

ಬಾಲ್ಯ ನಮಗೆ
ಇಷ್ಟದ ಅಭಿಮಾನ
ಅವುಗಳಿಗೆ.. ಸಂಚಾರದ
ಸಂಚಲನದ ನೆನಪು ಅದು||

ಸ್ವತಂತ್ರದ ಹಕ್ಕಿಗಳು
ಗರಿಗೆದರುವ ಮೊಗ್ಗುಗಳು
ಹುಸಿನಗುವ ತಾರೆಗಳು
ಉಯ್ಯಾಲೆಯ ಆಟಗಳು||

ಸ್ನೇಹಿತರೊಡನೆ ಅಲೆದಾಟ
ಸದಾ ಹೊರ ಸಂಚಾರ
ನೀರ ಅಲೆಯಂತೆ ಜೂಟಾಟ
ಸಂಜೆಯಲ್ಲಿ ನಿತ್ಯದ ಪಾಠ||

ಯಾರಿಗುಂಟು ಯಾರಿಗಿಲ್ಲ
ಆ ಭಾಗ್ಯ ಬಾಲ್ಯವೆಂಬ
ಸೌಭಾಗ್ಯ ಸುಮಧುರ ಘಳಿಗೆ
ನೆನಪುಗಳ ಕಡೆಗೆ..||||


About The Author

Leave a Reply

You cannot copy content of this page

Scroll to Top