ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  ಕನ್ನಡಾಭಿವೃದ್ಧಿ ಪ್ರಾಧಿಕಾರ ,ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಗಡಿನಾಡ ಪ್ರಾಧಿಕಾರ ,ಕನ್ನಡ ಪುಸ್ತಕ ಪ್ರಾಧಿಕಾರ  ಕನ್ನಡ ಸಂಸ್ಕೃತಿಇಲಾಖೆ, ಗ್ರಂಥಾಲಯ ವಿಭಾಗ ಮುಂತಾದ ಅನೇಕ ಕನ್ನಡ ಪರ ಸರಕಾರಿ ಸಂಘಟನೆಗಳು ನೂರಾರು ಇದ್ದರೂ ಸಹಿತ ಇವತ್ತು ಕನ್ನಡದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ;  ಕಳೆದ ನಾಲ್ಕು ವರುಷಗಳಿಂದ ಪುಸ್ತಕೋದ್ಯಮ ನೆಲೆ ಕಚ್ಚಿದೆ ,ಪುಸ್ತಕ ಪ್ರಾಧಿಕಾರ, ಕರ್ನಾಟಕ  ಗ್ರಂಥಾಲಯ ವಿಭಾಗವು  ಪ್ರಕಾಶಕರಿಗೆ  ಒಂದು ರೂಪಾಯಿ ಬಿಡಿ ಗಾಸು ಕೊಡದೆ ಸತಾಯಿಸುತ್ತಿದೆ.
 2021 ರಲ್ಲಿ ಸಲ್ಲಿಸಿದ  ಪ್ರಕಾಶಕರ ಅನೇಕ ಪುಸ್ತಕಗಳನ್ನು ತಿರಸ್ಕರಿಸಿದ್ದಾರೆ. ಕನ್ನಡ ಪುಸ್ತಕ
ಪ್ರಕ್ಷಣಕ್ಕೆ ಮುಂದೆ ಬಾರದ ಸಂದರ್ಭದಲ್ಲಿ. ಕನ್ನಡ ನಾಡು ನುಡಿ ಸೇವೆಗಾಗಿ ಮುಂದೆ ಬಂದ ರಾಜ್ಯದ ಅನೇಕರಿಗೆ ಆಘಾತ ಕಾಯ್ದಿದೆ.
     ಇತ್ತೀಚಿಗೆ ನೇಮಕಗೊಂಡ ಪುಸ್ತಕ ಆಯ್ಕೆ ಸಮಿತಿಯು ಸೃಜನ ಶೀಲ  ಸಾಹಿತ್ಯದ ಪ್ರಮುಖ ಅಂಗವಾದ  ಬಹುತೇಕ ಕವನ ಸಂಕಲನಗಳನ್ನು ತಿರಸ್ಕರಿಸಿದ್ದಾರೆ.ಅಲ್ಲದೆ ಅನೇಕರು  ಸ್ವಯಂ ಪ್ರಕಾಶನಕ್ಕೆ    ಮುಂದೆ ಬಂದ ಕವಿ ಲೇಖಕರ ಪರಿಸ್ಥಿತಿ ಹೇಳತೀರದು. ರಾಜಕಾರಣಿಗಳು ಲಕ್ಷಾಂತರ ಕೋಟಿ ಭೃಷ್ಟತೆಯನ್ನು ಮಾಡಿದರೂ ಕ್ಲೀನ್ ಚಿಟ್ ಸಿಗುತ್ತದೆ.    ಕೋಟಿ ಕೋಟಿ ಹಾನಿ ಮಾಡಿಕೊಂಡು ಪ್ರಕಾಶಕರು ಇನ್ನು ಮುಂದೆ ಕನ್ನಡ ಪುಸ್ತಕಗಳನ್ನು ಪ್ರಕಟ ಮಾಡುವದಿಲ್ಲ . ಲೇಖಕ ಕವಿ ಸಾಹಿತಿಗಳು ಆತ್ಮ ಹತ್ಯೆ ಮಾಡಿಕೊಳ್ಳುವ ಅತ್ಯಂತ ದುಸ್ಥಿತಿ ನಾಡಿಗೆ ಒದಗಿ ಬಂದಿದೆ.
  ಕನ್ನಡ ಸಂಸ್ಕೃತಿ ಇಲಾಖೆ ಗ್ರಂಥಾಲಯ ಮತ್ತು ಕನ್ನಡ ಪರ ವಿವಿಧ ಇಲಾಖೆಗಳು ಎಚ್ಚತ್ತು ಕನ್ನಡದ ಮರಣ ಹೋಮವನ್ನು ನಿಲ್ಲಿಸಬೇಕು . ಈ ಕೂಡಲೇ ಇಂತಹ ಪ್ರಕಾಶಕರಿಗೆ ಸರಕಾರವು ನೆರವಿಗೆ ಬರಲಿ. ಕನ್ನಡ ಪುಸ್ತಕೋಧ್ಯಮವನ್ನು ಬೆಳೆಸಲಿ.    
_________

.

About The Author

4 thoughts on ““ಕನ್ನಡ ಕೊಲ್ಲ ಬೇಡಿ ಕರ್ನಾಟಕ ಸರಕಾರವೇ”ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಲೇಖನ”

  1. ಸಾಹಿತಿಗಳು ಪ್ರಕಾಶಕರ ಪರವಾಗಿ ಸಹ ಮಾತನಾಡಬೇಕು.. ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ನಿಮ್ಮ ಈ ಕಳಕಳಿಯನ್ನು ಎಲ್ಲರೂ ಮನಗಾಣಬೇಕು.. ನಿಮ್ಮ ಈ ಸಹಕಾರ ಧೋರಣೆ ಎಲ್ಲರೂ ಮೆಚ್ಚುವಂತಹದು ಸರ್

    ಸುತೇಜ
    ಬೆಳಗಾವಿ

  2. ಪ್ರೊ ಬಿ ಆರ್ ಪೊಲೀಸಪಾಟೀಲ

    ನಿಮ್ಮ ಲೇಖನ ಸಾಮಯಿಕ ಹಾಗು ಕಣ್ ತೆರೆಸುವಂಥದು.
    ಆಯ್ಕೆ ಸಮಿತಿಯ ಕವಿ ಕಾವ್ಯ ವಿರೋಧಿ ನೀತಿ ಖಂಡನಾರ್ಹ.
    ಎರಡು ದಿನ ಪ್ರದರ್ಶನ ಮಾಡಿ ತೆಗೆದು ಬಿಡುತ್ತಾರೆ.
    ದೂರದ ಕವಿ ಲೇಖಕರಿಗೆ ಈ ಹುನ್ನಾರ ಗೊತ್ತಾಗುವುದೇ ಇಲ್ಲ.
    ಉತ್ತರ ಕರ್ನಾಟಕದ ಕವಿ ಲೇಖಕರಿಗೆ ಆಗುತ್ತಿರುವ ನಿರಂತರ ಅನ್ಯಾಯ ದ ಕುರಿತು ದನಿ ಎತ್ತದ ನಮ್ಮ ಭಾಗದ ಜನ ಪ್ರತಿನಿಧಿಗಳ ಅಸಡ್ಡೆ ಯೇ ಇದಕ್ಕೆ ಕಾರಣ.
    ಮೊದಲು ಇವರನ್ನು ಎಚ್ಚರಿಸುವ ಕಾರ್ಯ ಆಗಬೇಕು.
    ನಿಮ್ಮ ಕಾಳಜಿ ಗೆ ಧನ್ಯವಾದಗಳು ಸರ್.

Leave a Reply

You cannot copy content of this page

Scroll to Top