ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪ ಗುಳೆ ಹೊಡೆದ
ಎರೆ ಸಾಲಿನ
ನಡುವೆ ಅದೆಂತ ಚಂದದ
ಬೀಜಗಳ ಅಕ್ಷರಗಳು
ಒಂದು‌ ಕಾಗುಣಿತ ತಪ್ಪಿಲ್ಲ
ಒಂದಕ್ಷರ ,ಗುರು‌ಲಘುಗಳು
ಹೆಚ್ಚಲ್ಲ ಕಮ್ಮಿಯಲ್ಲ
ಗಮಕಿಯೊಬ್ಬನ
ಸುಸ್ರಾವ್ಯ ರಾಗಕ್ಕೆ
ತೊನೆವ ಗಿಡ ಬಳ್ಳಿಗಳ
ಓಲಾಟದ ಹಾಡು

ಗರಿಗರಿಗೂ‌ ಮೂಡಿ ನಿಂತ ಚಿಗುರು .
ಹೂವಾಗಿ ಕಾಯಾಗಿ ಹಣ್ಣಾಗಿ
ಎದೆಯ ಹೊಲದ ತುಂಬ
ಫಸಲು ಸಮೃದ್ಧಿ

ಕಣ್ಣಿಗೆ ಕಣ್ಣು ಹಚ್ಚದೆ ಕಾವಲಿದ್ದು
ಕಟ್ಟಿದ್ದ ಬೆಳೆಯ ಅವರಿವರ
ಕೆಟ್ಟ ದೃಷ್ಟಿ ಕೈಗಳಿಗೆ
ಹತ್ತದಂತೆ ಕಾವಲಿದ್ದು ಕಾಯುವ
ಸೇನಾಪತಿಯವನು

ಅದೇನು‌ ಮಾಯ ಮಾಡಿಯೊ
ಕಟ್ಟೆಚ್ಚರದ ಬೇಲಿ ಜಿಗಿಯುವ
ಕಳ್ಳಕಾಕರು ಸುತ್ತ ಮುತ್ತ
ಕಟಾವಿಗೆ ಬಂದ ಬೆಳೆಯ
ಎಗರಿಸಿರಿಯಾರೆಂಬ
ಸಂಶಯದಲಿ ಕಾಪಿಟ್ಟವನು

ಬಾಳುವೆಯೆಂಬ ಬೆಳೆಗೆ
ಅವನ ಕಣ್ಣಾಸರೆಯ ಕಾವಲಿಗೆ
ಕೃತಜ್ಞ ಫಲಗಳು
ಅವನ ಉಸಿರು ಹೊತ್ತು
ಹೆಸರನೀಯಲು ಕಾಯುತ್ತಿವೆ
ಈಗ…


About The Author

1 thought on “ವೈ.ಎಂ.ಯಾಕೊಳ್ಳಿ ಅವರಕವಿತೆ-ಸಮೃದ್ಧಿ ಸಾಲು”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಸುಂದರ ಭಾವ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top