ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕು ನೋವು ನಲಿವುಗಳ ಬಣ್ಣದ ತಿನಿಸಂತೆ
ಬೇವು ಬೆಲ್ಲಗಳ ಮಿಶ್ರಣದ ಡಬ್ಬಿಯಂತೆ
ಕಹಿ ಉಂಡಾಗಲೇ ಸಿಹಿ ರುಚಿಯಾಗುವುದಂತೆ

ಕಾಲೆಳೆಯೋರು ಯಾವಾಗಲೂ ಕಾಲಡಿಯೇ ಇರುವರು
ಕೈ ಹಿಡಿದು ಎತ್ತುವವರು ಮೇಲೆಯೇ ಇರುವರು
ಬಗ್ಗುವವರಿದ್ದಷ್ಟು ಗುದ್ದುವವರಿರುವರು

ನಾವು ಏರುತ ಉಳಿದವರ ಎತ್ತಬೇಕು
ದಯೆ ಕರುಣೆ ಅನುಕಂಪ ನಮ್ಮಲ್ಲಿರಬೇಕು
ಕಷ್ಟದಲಿ ಸಹಾಯವು ಇಷ್ಟದಲಿ ಸಹಬಾಳ್ವೆಯು
ಜೊತೆಯಾಗಬೇಕು

ಕತ್ತಲೆಯೊಳ್ ಹಣತೆಯು ಬೀಗಿ ಬೆಳಗುವುದು
ಎಲ್ಲರ ಬುತ್ತಿಯಲೂ ಸಮಪಾಲು ಇರುವುದು
ದಕ್ಕಿದ್ದು ನಮ್ಮದು ತಾಳ್ಮೆಯಿಂದ ನಡೆದು ಬಿಡು

ಎಲ್ಲ ಸಿಗುವುದು ರಾತ್ರಿ ಹಗಲುಗಳ ಸಮತುಲನದಲ್ಲಿ
ಮೊಗದಿ ನಗುವಿರಲಿ ಸಹಕರಿಸುವ ಗುಣವಿರಲಿ
ಇಂದು ಮಾತ್ರ ವಾಸ್ತವ ಅರ್ಥೈಸಿ ಬಾಳುವುದ ಕಲಿ

ಕಾಲದ ಆಟವಿದು ತಿಳಿದು ಬಾಳುವನೇ ಜಾಣ
ನಾವಿಲ್ಲಿ ಅತಿಥಿಗಳು ಎಲ್ಲವೂ ಬಾಡಿಗೆಯ ಸೊತ್ತಣ್ಣ
ಮರಳಿ ಹೋಗುತ ನಿಜ ನೆಲೆಗೆ ಎಲ್ಲವ ತೊರೆಯಬೇಕಣ್ಣ

ಇದ್ದಾಗ ಹಮ್ಮಿರದೆ ಬಿದ್ದಾಗ ಅಳುಕದೆ
ಹೊಗಳಿಕೆಗೆ ಹಿಗ್ಗದೇ ತೆಗಳಿಕೆಗೆ ಕುಗ್ಗದೆ
ನಿಂದಿಸುವರ ಹಿಂದಿಟ್ಟು ಪ್ರೀತಿಸುವರ ಮುಂದಿಟ್ಟು
ಮಂದಸ್ಮಿತರಂತೆ ನಡೆಯೋಣ

About The Author

1 thought on “ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಸ್ವೀಕರಣೆ”

  1. Precilla Noronha

    ಬದುಕನ್ನು ಬಂದಂತೆ ಸ್ವೀಕರಿಸಿ– ಕವಿತೆ ಬಹಳ ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು Shalini madam.

Leave a Reply

You cannot copy content of this page

Scroll to Top