ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುಭವ ಇಲ್ಲದೇ
ಅಮೃತದ ಸಿಂಚನ.
ಮಗು, ಮತ್ತು ತಾಯಿಗೆ
ಚೊಚ್ಚಲ ಬಾಣಂತನ.
**
ಮಗುವಿನ ಮೊದಲ
ಅಳು ಮತ್ತು ನಗುವು,
ಎರಡೂ ಪರಿಶುದ್ಧ
ಸುಖ ದುಃಖ ಇಲ್ಲದ್ದು.
*
ಹಿತವಾಗಿ ಕಚ್ಚಿದ
ಮರ್ದಿಸಿ ಮೊಲೆಯುಂಡ ,
ಮುದ್ದು ಮಗು ಕಂದಮ್ಮ
ಚೈ.. ಬಡಿದ ಹೆತ್ತಮ್ಮ.
**
ಭೂಮಿಗೆ ಬಂದೊಡನೆ
ಸಂಗೀತದ ಸೊಗಸು.
ಸ…ರಿ…ಗ…. ಲೆಕ್ಕಿಸದೆ
ನೇರ “ಮಾ”…. ಎಂದ ಕೂಸು.

ಮನೇಲಿ ಗಲಿಬಿಲಿ
ಮನಸ್ಸು ಕಸಿವಿಸಿ,
ಎಲ್ಲಕ್ಕೂ ಔಷಧವು
ಮಗುವಿನ ನಗುವು.
**
ಸಿರಿವಂತ, ಬಡವ
ಜಾತಿ ಮತ ಭೇದವ,
ಅರಿಯದ ಕೂಸಂತೆ
ಇರಲು ಹಾತೊರೆವೆ.

———————–

About The Author

1 thought on “ವ್ಯಾಸ ಜೋಶಿ ಅವರ ತನಗಗಳು”

Leave a Reply

You cannot copy content of this page

Scroll to Top