ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಸಿಲು ಇರಲಿ ಎನಗೆ
ನೆರಳು ಸಿಗಲಿ ನಿನಗೆ
ಯಾರ ಹಂಗು ಇರದು
ಜೊತೆಯಾಗಿ ಬದುಕೋ ನಮಗೆ

ನಿನ್ನ ಸ್ಪರ್ಶದ ಕೊಡುಗೆ
ನನಗೆ ನೀಡಿದ ಸಲುಗೆ
ಬೇಡ ಎನ್ನಲೇಕೆ ಎನಗೆ
ಆ ನಿನ್ನ ನಗುವಿನ ಹೊಗೆ

ನೀನಿರದ ಜಾಗದಲ್ಲಿ
ನಾನಿರೆನು ಅಲ್ಲಿ
ನೀನೆಂದು ಜೊತೆಗಿರಲು
ನನಗದುವೆ ನೆರಳು

ಹೊಣ್ಣಿನ ಹೊಳಪಿನಂತೆ
ಹೊಳೆಯುತ್ತಿರಲಿ ಪ್ರೀತಿ
ಬದುಕು ಇರಲಿ ಹೀಗೆ
ನೂರೊಂದು ತರಹದ ಹಾಗೆ


About The Author

Leave a Reply

You cannot copy content of this page

Scroll to Top