ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದ ಭಾವನೆಗಳೆಲ್ಲ
ಮೈ ತುಂಬಿ ಹರಿದು
ಕನಸುಗಳ ಪಲ್ಲವಿಯಲ್ಲಿ ಗಾನ ಹಾಡಿತು

ಹಸಿರು ಸಿರಿಯ ಸಾಲುಗಳಲ್ಲಿ
ಮಳೆಯ ತುಂತುರು ನಿನಾದದಲ್ಲಿ
ಹನಿ ಹನಿ ಇಬ್ಬನಿ ತಾಗಿ
ಮತ್ತದೇ ಪ್ರೀತಿಯ ನೆನಹಿಕೆ

ಕಾದು ಕಾದು ಕನವರಿಸಿದ ಕಂಗಳಿಗೆ
ದೂರದಲ್ಲಿ ಎಲ್ಲೋ ಆಸೆಯ ಪಸೆ
ಕಾಣಬಹುದು ತೇಲಬಹುದು ಮುಗುಳ್ನಗೆಯೊಂದಿಗೆ ನಕ್ಕು ಹಗುರಾಗಬಹುದು

ಜೀವಕ್ಕೆ ತಾನೇ ಜೀವದ ಅರಿವು ಕನಸಿಗೆ ತಾನೇ ಬೆಳಕಿನ ಹರಿವು ನನ್ನ ಮತ್ತು ಅವನೊಳಗಿನ ಸೆಳವು ಕಂಡು ಕಾಣದಂತೆ ಕಾಯುತ್ತಿರುವುದು

ಬದುಕಿನ ನಿರಂತರ ಉತ್ಸವದಲ್ಲಿ ಸುಖ ದುಃಖಗಳ ಸಂಬಂಧದಲ್ಲಿ ಜೀವಾಳತೆಯ ಸೆಲೆಯೊಂದು ಕಾಯುತ್ತಲೇ ಇದೆ
ಕಣ್ಣಳತೆಯ ದೂರದವರೆಗೆ


About The Author

2 thoughts on “ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-”

  1. ಕವನ ಚೆನ್ನಾಗಿದೆ ಮತ್ತು ಅದ್ಭುತವಾಗಿದೆ. ನಿಮ್ಮ ಆಲೋಚನೆಗಳೊಂದಿಗೆ ಬರೆಯುವುದನ್ನು ಮುಂದುವರಿಸಿ.

Leave a Reply

You cannot copy content of this page

Scroll to Top