ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀಕ ಬೇಕು ಜೀವನ ಜೋಕಾಲಿ
ಒಮ್ಮೆ ಮೇಲೆ,ಒಮ್ಮೆ ಕೆಳಗೆ
ಜಿಕಲೇ ಬೇಕು ಜೀವನ ಜೋಕಾಲಿ !

ಬಡವ-ಬಲ್ಲಿದ
ಮೇಲು-ಕೀಳು ಎನ್ನುವಂತಿಲ್ಲ
ಅವರವರ ಶಕ್ತಿಅನುಸಾರ
ಎಲ್ಲರೂ ಜಿಕಲೇಬೇಕು ಜೋಕಾಲಿ!

ಮೇಲೆ ಬಂದಾಗ ಹಿಗ್ಗದೆ,
ಕೆಳಕ್ಕೆ ಬಂದಾಗ ಕುಗ್ಗದೆ
ಸಮಚಿತ್ತದಿಂದ
ಜಿಕಲೇಬೇಕು ಜೀವನ ಜೋಕಾಲಿ !

ಮಕ್ಕಳಿಂದ ಹಿಡಿದು
ಮುದುಕ-ಮುದುಕಿಯರವರೆಗೂ
ಮಸಣ ಸೇರೊತನ
ಜಿಕಲೇಬೇಕು ಜೀವನ ಜೋಕಾಲಿ!

ಚಳಿ -ಮಳೆಗೆ,ಗಾಳಿ- ಬಿಸಲಿಗೆ
ಕಷ್ಟ- ನಷ್ಟಕ್ಕೆ
ಬೆದರದೇ ಜೀಕಬೇಕು
ಜೀವನ ಜೋಕಾಲ !

ಈ ಜೊಕಾಲಿ
ಆಟ ಆಡಲೇಬೇಕು
ಔಟ್ ಆಗೊವರೆಗೂ
ತಪ್ಪಿಸಿಕೊಳ್ಳಲು ಸಾದ್ಯವಿಲ್ಲ !

ಔಟ್ ಆದಮೇಲೆ
ಇನ್ನೊಬ್ಬರಿಗೆ
ಜೊಕಾಲಿ ಬಿಟ್ಟು
ತೆರಳಲೇಬೇಕು
ಆಸ್ತಿ-ಪಾಸ್ತಿ,ಮಡದಿ-ಮಕ್ಕಳೆನ್ನದೆ!

About The Author

5 thoughts on “ನಾಗಪ್ಪ ಬಡ್ಡಿ ಅವರ ಕವಿತೆ-ಜೀವನ ಜೋಕಾಲಿ…..!”

Leave a Reply

You cannot copy content of this page

Scroll to Top