ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೆಳೆಯುತ್ತಲೇ ಇರುತ್ತವೆ ಜೊತೆಯಾಗಿ
ಬಿರುಗಾಳಿಗೆ ಬಗ್ಗಿದರೂ ಮತ್ತೆ ತಲೆಯೆತ್ತಿ ನಿಲ್ಲುತ್ತವೆ ಲೆಕ್ಕಿಸದೆ ಸುತ್ತಲಿನ ಮರಗಳು
ಧರೆಗೆ ಉರುಳುತ್ತಿರಲು

ಸತ್ತಜೀವವ ಹೊತ್ತು ಮಸಣಕ್ಕೆ ಹೊರಟರೂ
ಕಣ್ಣೀರು ಬಿಡಲಿಲ್ಲ ನಡೆವರು ಮೌನದಲಿ
ಜನುಮ ಮರಣದ ಗುಟ್ಟು ಅರಿತವರು
ಸುತ್ತಲಿನ ಜನರು ಅತ್ತು ಮರೆಯುವರು

ಎದೆಯ ಸೀಳಿದರೂ ಏಕೆಂದು ಕೇಳದಿವರು
ಬಡವರ ಗುಡಿಸಲಿಗೆ ನೆರಳು ಕೊಟ್ಟವರು
ಎಳೆ ಎಳೆಯಾಗಿ ಸಿಗಿದು ಕುಶಲದಲಿ ನೆಂದರು
ಉಸಿರು ಬಿಡದೆ ಹಸೆಯಾಗಿ ಮಲಗುವರು

ದೌರ್ಜನ್ಯಗಳ ಸರಮಾಲೆ ಮರೆತು ಇನ್ನೊಬ್ಬರ
ನೆರವಾಗಿ ನಿಂತವರು ಹುಟ್ಟಿದ ಮಕ್ಕಳು ಕೈಬಿಟ್ಟರೂ ಜೊತೆಯಾಗಿ ಕೊನೆವರೆಗೆ
ನಡೆಯುಲು ಆಧಾರ ನೀಡಿದವರು

ಬಿರುದು ಬಾವಲಿಗಳ ತೊರೆದು ಸೇವೆಯಲಿ
ಮುಳುಗಿದರು ಸಿಡಿದು ಆಕ್ರೋಶದಲಿ
ಕ್ರೌರ್ಯ ಮಿತಿಮೀರಿದರೆ ತಲೆಯೊಡೆದು
ಸೊಂಟ ಮುರಿದು ನೆಲಕ್ಕೆ ಚಚ್ಚ ಬಲ್ಲ ವರು


About The Author

Leave a Reply

You cannot copy content of this page

Scroll to Top