ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅವ್ವನ ದೇವರ ಜಗಲಿಯಲ್ಲಿ
ನೂರಾರು ದೇವರುಗಳು
ಠಿಕಾಣಿ ಹೂಡಿವೆ
ಬಹುದಿನಗಳಿಂದ!

ವರ್ಷ-ವರ್ಷಕ್ಕೆ
ವಿಸ್ತರಿಸುತ್ತಲೇ ಇತ್ತು
ನನ್ನವ್ವನ
ದೇವರ ಸಾಮ್ರಾಜ್ಯ!

ಅವ್ವನ ದೇವರ ಕೋಣೆಯಲ್ಲಿ
ಹಿಂದೂಗಳ ಶಿವನೂ,
ವೈಷ್ಣವರ ಸತ್ಯನಾರಾಯಣನೂ,
ಇಸ್ಲಾಂರ ದೂದಪೀರಾ
ಎಲ್ಲರೂ ಇದ್ದಾರೆ…!
ಜೊತೆಗೆ
ಲಕ್ಷ್ಮಿ-ಸರಸ್ವತಿ-ದುರ್ಗಾ
ಸಾಯಿಬಾಬಾ-ಮೈಲಾರಿ-ಆಂಜನೇಯ
ಇತ್ಯಾದಿ…ಇತ್ಯಾದಿ… ದೇವರುಗಳು
ಸಮಾವೇಶಗೊಂಡಿವೆ
ಜಗಲಿಯೆಂಬ
ಒಂದೇ ವೇದಿಕೆಯಲ್ಲಿ!

ಎಲ್ಲ ದೇವರನ್ನು
ಒಂದೇ ಮನದಿ
ಪೂಜಿಸಿದ ನನ್ನವ್ವ
ನೂರಾರು ದೇವರುಗಳ
ಸಾಮ್ರಾಜ್ಯದ ಒಡತಿ!
ಸರ್ವಧರ್ಮ ಸಮನ್ವಯದ
ಉಪಾಸಕಿ!


ಅವ್ವನ ದೇವರ ಜಗಲಿಯ ಮೇಲೆ
ನೂರಾರು ದೇವರುಗಳ ಸಾಮ್ರಾಜ್ಯ
ಆದರೆ
ನನ್ನ ಬದುಕಿನ ಸಾಮ್ರಾಜ್ಯದಲ್ಲಿ
ದೇವರೆಂದರೆ ಅವ್ವ
ಅವ್ವನೆಂದರೆ ದೇವರು
ನಮಿಸುವೆನು ಅವಳನ್ನೆ
ನೂರಾರು ಬಾರಿ
ಅವ್ವನೆಂದರೆ ನನಗೆ

ಮುಕ್ಕೋಟಿ ದೇವರಿಗೆ ಸಮ!

About The Author

3 thoughts on “ಡಾ. ಸುಮಂಗಲಾ ಅತ್ತಿಗೇರಿ ಅವರಕವಿತೆ-‘ಅವ್ವನ ಜಗಲಿ’”

  1. ಅದ್ಭುತ…. ಚೆನ್ನಾಗಿದೆ ಮೇಡಂ ಜೀ….

    – ಗುರುಪ್ರಕಾಶ್
    ಕಜಾವಿವಿ.

Leave a Reply

You cannot copy content of this page

Scroll to Top