ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸತ್ಯ ಹೇಳಲು ಹೆದರಲಿಲ್ಲ
ನಿತ್ಯ ಮುಕ್ತಿಯ ಶರಣರು.
ಸದ್ದು ಮಾಡದೆ ಯುದ್ಧ ಮಾಡಿ
ಮಣ್ಣಿನಲ್ಲಿ ಮಡಿದರು .

ವರ್ಗ ವರ್ಣದ ಕಸವ ಕಿತ್ತು
ಸಮತೆ ಸಸಿಯನ್ನು ನೆಟ್ಟರು
ಸತ್ಯ ಶಾಂತಿ ವಿಶ್ವ ಪ್ರೀತಿ
ಮನುಜ ಪಥಕೆ ನಡೆದರು.

ಶ್ರಮಿಕರೆಲ್ಲ ದುಡಿದು ಬಂದರು
ಕೂಡಿ ಹಂಚಿ ತಿಂದರು.
ದಯೆ ಧರ್ಮ ಭಾಷೆ ನುಡಿದರು
ಹೊಸ ಮುನ್ನುಡಿ ಬರೆದರು.

ಶರಣ ಶರಣೆಯರು ಖಡ್ಗವೆತ್ತಿ
ವಚನ ಕಾಯ್ದು ಕೊಟ್ಟರು.
ಅಪ್ಪ ಬಸವನ ಕನಸಿನಂತೆ
ಕ್ರಾಂತಿ ಕಹಳೆ ದುಡಿಯ ಬಡಿದರು.

ಎತ್ತ ಹೋದರು ನನ್ನ ಶರಣರು ?
ಸತ್ತು ಬದುಕಿದ ಯೋಧರು
ಬಯಲಿನೊಳಗೆ ಬಯಲಾದರು.

ಕರುನಾಡಿನ ಒಡೆಯರು.


About The Author

3 thoughts on “ಡಾ.ಶಶಿಕಾಂತ.ಪಟ್ಟಣ -ಪೂನಾ ಅವರ ಕವಿತೆ-ಕರುನಾಡಿನ ಒಡೆಯರು.”

  1. ಕರುನಾಡಿನ ಒಡೆಯರು… ಓದುತ್ತಾ ಓದುತ್ತಾ
    ನಮ್ಮ ಶರಣರ ಬಗೆಗೆ ಇನ್ನಷ್ಟು ಅಭಿಮಾನ
    ಮತ್ತು ಗೌರವ ಹೆಚ್ಚಾಯಿತು.. ಇಂಥ ಕವನಗಳ
    ಅವಶ್ಯಕತೆ ಇದೆ.. ನಮ್ಮ ಶರಣರ ಕಾಯಕವನ್ನು…ವಚನಗಳನ್ನು..ಕಾರ್ಯವನ್ನು… ಸಾಹಸವನ್ನು
    ಪ್ರತಿಯೊಬ್ಬರಿಗೂ ತಿಳಿಸಿಹೇಳಲು.. ದಿನ ನಿತ್ಯ
    ನೆನಪು ಮಾಡಿಕೊಳ್ಳಲು… ಅವರು ತೋರಿಸಿದ
    ಮಾರ್ಗದಲ್ಲಿ ನಡೆಯಲು… ತಮ್ಮ ಇಂಥ
    ಕವನಗಳು ಎಲ್ಲರಿಗೂ ಸ್ಫೂರ್ಥಿಯಾಗಲಿ ಎಂದು ಬಯಸುವೆ.. ಸರ್

    ಸುಧಾ ಪಾಟೀಲ
    ಬೆಳಗಾವಿ

  2. ಡಾ ಶರಣಮ್ಮ ಗೋರೆಬಾಳ

    ಅತ್ಯುತ್ತಮ ಕವನಗಳನ್ನು ಒಳಗೊಂಡ ಸುಂದರ ಭಾವ

  3. ಶರಣರೂ ಎತ್ತೂ ಹೋಗಿಲ್ಲ
    ಅವರ ವಚನಗಳಲ್ಲಿದ್ದಾರೆ
    ಜನರ ಮನಸ್ಸಿನಲ್ಲಿ ಇದ್ದಾರೆ.

    ಸುಂದರ ಕವನ ಸರ್
    ಅಕ್ಕಮಹಾದೇವಿ

Leave a Reply

You cannot copy content of this page

Scroll to Top