ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಕಸ್ತೂರಿ ದಳವಾಯಿ ಕವಿತೆ ಭೂಮಿಗೆ ಭಾರವಲ್ಲ

ಭೂಮಿಗೆ ಭಾರವಲ್ಲ
ಭೂತಾಯಿ ನಿನ್ನೂಡಲ
ಕರುಳಕುಡಿ ನಾನು

ಡಾ.ಕಸ್ತೂರಿ ದಳವಾಯಿ ಕವಿತೆ ಭೂಮಿಗೆ ಭಾರವಲ್ಲ

ಡಾ.ಕಸ್ತೂರಿ ದಳವಾಯಿ ಕವಿತೆ ಭೂಮಿಗೆ ಭಾರವಲ್ಲ Read Post »

ಕಾವ್ಯಯಾನ

ಪ್ರೇಮಾ ಟಿಎಂಆರ್ ಅವರ ಕವಿತೆ-‘ನಿನ್ನ ದಾರಿಗೆ ದಿಟ್ಟಿಯ ನೆಟ್ಟು’

ಏನಾದರೂ ಅಂದುಕೊ
ಅದು ನಿನಗಾಗಿಯೇ ಕೃಷ್ಣ ಹೆರವರಿಗಲ್ಲ
ಕಾಯುತ್ತೇನೆ ಹೆರಳು ನೆರೆಯುವ ತನಕ

ಪ್ರೇಮಾ ಟಿಎಂಆರ್ ಅವರ ಕವಿತೆ-‘ನಿನ್ನ ದಾರಿಗೆ ದಿಟ್ಟಿಯ ನೆಟ್ಟು’

ಪ್ರೇಮಾ ಟಿಎಂಆರ್ ಅವರ ಕವಿತೆ-‘ನಿನ್ನ ದಾರಿಗೆ ದಿಟ್ಟಿಯ ನೆಟ್ಟು’ Read Post »

ಇತರೆ, ಕಾವ್ಯಯಾನ

ಬಿದಿರು ಕಾಯಕದಲ್ಲಿ ಮಹಿಳಾ ಸ್ವಾವಲಂಬನೆಭಾರತಿ ಅಶೋಕ್ ಅವರ ಲೇಖನ

ವಿಶೇಷ ಲೇಖನ ಬಿದಿರು ಕಾಯಕದಲ್ಲಿ ಮಹಿಳಾ ಸ್ವಾವಲಂಬನೆ ಭಾರತಿ ಅಶೋಕ್  ದುಡಿಯದವರಿಗೆ ಉಣ್ಣುವ ಹಕ್ಕಿಲ್ಲ” ಎನ್ನುವ ಮಾತನ್ನು ಅಕ್ಷರಶಃ ಪಾಲಿಸುವ, ಕಾಯಕದ ಮಹತ್ವ ಅರಿತಿರುವ ಮತ್ತು ಅದನ್ನೇ ಬದುಕುತ್ತಿರುವ ಸಮುದಾಯಗಳಲ್ಲಿ ಮೇದಾರ ಸಮುದಾಯವೂ ಒಂದು. ದುಡಿದೇ ಉಣ್ಣುವ ಕಾಯಕ ಕಲ್ಪನೆಯನ್ನು ಕೊಟ್ಟ ಶರಣರನ್ನುಬದುಕುತ್ತಿರುವ ಈ ಸಮುದಾಯದಲ್ಲಿ “ಬಿದಿರು’ ಮಹತ್ವದ ಪಾತ್ರ ವಹಿಸಿದೆ. ತಮ್ಮ ಕಾಯಕಕ್ಕೆ ಬೇಕಾದ ಬಿದಿರು ಮೆಳೆಯನ್ನು ಪೂಜಿಸಿಕೊಂಡು ಅದನ್ನೇ ಹಾಸಿ ಹೊದ್ದು ಮಲಗುವಷ್ಟು ಅದು ಬದುಕನ್ನು ಆವರಿಸಿದೆ. ಪ್ರತಿ ವರ್ಷ ಭರತ ಹುಣ್ಣಿಮೆ ಒಳಗೆ ಕರ್ನಾಟಕದ ಬೇರೆ ಬೇರೆ ಕಡೆ ವಾಸಿಸುವ ಸಮುದಾಯದ ಜನರು ಮಲೆಯಮ್ಮ ಚೌಡಮ್ಮ (ಮಲೆಯಮ್ಮ ಅಂದರೆ ಬಿದಿರನ ಮೆಳೆ. ಚೌಡಮ್ಮ ಎಂದರೆ ಬಿದಿರಿನ ಒಂದು ಜಾತಿ ‘ಚೌಲ’ ಚೌಲಮ್ಮ >ಚೌಡಮ್ಮ)ಹಬ್ಬವನ್ನು ತಮಗೆ ಅನುಕೂಲವಾದ ಮಂಗಳವಾರದಂದು ಆಚರಿಸುತ್ತಾರೆ. ಮೂರು ತಿಂಗಳವರೆಗೂ ಇದನ್ನು ಅಲ್ಲಲ್ಲಿ ಕಾಣುತ್ತೇವೆ. ಮಲೆಯಮ್ಮ ಮತ್ತು ಚೌಡಮ್ಮ ಎಂದೇ ಆಡು ಭಾಷೆಯಲ್ಲಿ ಕರೆಯಲ್ಪಡುವ ಮೆಳೆಯಮ್ಮ ಚೌಲಮ್ಮ ಮೇದಾರ ಸಮುದಾಯದ ಕುಲದೇವತೆ. ಪ್ರತಿವರ್ಷ ತಾವು ವಾಸಿಸುವ ಪ್ರದೇಶದ ಜನರೆಲ್ಲಾ ಸೇರಿ ಸೌಹಾರ್ದದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ದೇವಿಯ ವಾರವಾದ ಮಂಗಳವಾರ ಯಾರೂ ಕೆಲಸ ಮಾಡದೇ ತಾವು ನಂಬಿಕೊಡಿರುವ, ತಮ್ಮ ಬದುಕನ್ನು ಪೊರೆವ ದೇವತೆಗೆ ಕೃತಜ್ಞತೆ ಸಲ್ಲಿಸುತ್ತಾರೆ. “ಎನಗಿಂತ ಕಿರಿಯರಿಲ್ಲ ಶಿವಶರಣರಿಗಿಂತ ಹಿರಿಯರಿಲ್ಲ” ಎನ್ನುವ ಶರಣರ ಸರಳತೆಯನ್ನು ಮೈಗೂಡಿಸಿಕೊಂಡು ಬದುಕತ್ತಾರೆ. ವಯಸ್ಸಿನಲ್ಲಿ ಹಿರಿಯರನ್ನು ಮಾತನಾಡಿಸಿದರೆ ಅಕ್ಕ ಅಣ್ಣ ಎನ್ನುತ್ತಲೇ ಮಾತು ಪ್ರಾರಂಬಿಸುವ ಇವರ ದಿನ ಪ್ರಾರಂಭವಾಗುವುದು ಹಣೆಯಲ್ಲಿ ವಿಭೂತಿಯೊಂದಿಗೆ. ಪುರುಷರು ಮನೆಯಲ್ಲಿ ಮತ್ತು ಮನೆಯಿಂದ ಹೊರಗು ಕೆಲಸ ಮಾಡುವುದು ಸಾಮಾನ್ಯ. ಬಿದಿರನ್ನೇನಂಬಿಕೊಂಡು ಒಳ ಹೊರಗು ತಮ್ಮನ್ನು ತೊಡಗಿಸಿ ಕೊಂಡಿರುವುದು ಹೌದು. ಕೇವಲ ಅಕ್ಷರ ಜ್ಞಾನನಕ್ಕಾಗಿ ಶಿಕ್ಷಣ ಪಡೆದು ಸ್ವಃಉದ್ಯೋಗ ಕೈಕೊಂಡು ಸುಂದರ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. . ತೊಡಗಿಸಿಕೊಂಡ ಬಗೆ ಮತ್ತು ಸ್ವಾವಲಂಬನೆ.ಮಹಿಳೆಯರು ಸಂಖ್ಯೆಯಲ್ಲಿ ಹೆಚ್ಚು ಶಿಕ್ಷಣ ಪಡೆದವರಲ್ಲ, ಆದರೆ ಇತ್ತೀಚೆಗೆ ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣ ಪಡೆದು ಮನೆಯಿಂದ ಹೊರಗಡೆ ತಮ್ಮ ವೃತ್ತಿ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ, ಆದರೆ ಅತೀ ವಿರಳ.ಮನೆಯಲ್ಲಿಯೇ ಬಿದಿರನ್ನು ಸೀಳಿ ಸಾಮಾನ್ಯವಾಗಿ ದಿನ ಬಳಕೆಯ ವಸ್ತುಗಳಾದ ಮೊರ, ಬುಟ್ಟಿ, ಬೀಸಣಿಕೆ,ಚಾಪೆ ತಯಾರಿಸುವುದು ಸಂಪ್ರದಾಯ. ಒಂದು ಇಡೀ ಬಿದಿರನ್ನು ಸೀಳುವಾಗಲೇ ಅವರ ಕೌಶಲ್ಯ ಕಣ್ಣಿಗೆಕಟ್ಟುತ್ತದೆ. ತಾವು ಗಂಡಸರ ಸಹಾಯವಿಲ್ಲದೇ ಕತ್ತಿಯಿಂದ ಸೀಳಿ ಅತೀ ಸೂಕ್ಷ್ಮ ಹೋಳುಗಳಾಗಿಸಿಕೊಂಡು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ಬದುಕುತ್ತಾರೆ. ಹಾಗೆ ಸೀಳುವಾಗ ಬಿದಿರಿನ ಸೂಕ್ಷ್ಮ ಸೀಳು ಚುಚ್ಚಿ ಗಾಯವಾಗುವುದು ಸರ್ವೇ ಸಾಮಾನ್ಯ. ದಿನಕ್ಕೆ ಅದೆಷ್ಟು ಬಾರಿ ಹಾಗೆ ಕೈ ಕಾಳುಗಳಿಗೆ ಚುಚ್ಚಿಕೊಳ್ಳುತ್ತವೆ. ಹಾಗೆ ಚುಚ್ಚಿದ ತಕ್ಷಣ ಹಲ್ಲಿನಿಂದ ಕಿತ್ತು ತೆಗೆಯುವುದು ಅವರಿಗೆ ಸಾಮಾನ್ಯ ಸಂಗತಿ. ಅಷ್ಟು ದೊಡ್ಡ ಬಿದಿರನ್ನು ಬೆಂಕಿ ಕಡ್ಡಿ ಗಾತ್ರ ಅಥವಾ ಅದಕ್ಕು ತೆಳುವಾಗಿ ಸೀಳುವುದೆಂದರೆ ಅದೊಂದು ಧ್ಯಾನವೇ ಸರಿ.ಅದು ಅಳತೆ ಪಟ್ಟಿಯಂತೆ ಎಷ್ಟು ಗಾತ್ರದಲ್ಲಿ ಬೇಕು ಅಷ್ಟೇ ಗಾತ್ರದ ಹೋಳುಗಳನ್ನು ಸೀಳಿಕೋಳ್ಳುವಾಗ ಯಾವ ಗಣಿತಜ್ಞರಿಗೂ ಕಡಿಮೆ ಇಲ್ಲ. ಇವರ ಲೆಕ್ಕಚಾರ.ಲೆಕ್ಕ ಕೇವಲ ಅಳತೆ ಕೊಟ್ಟ ಮೊರ, ಬುಟ್ಟಿ ಚಾಪೆಗಳಿಗೆ ಸೀಮಿತವಲ್ಲ. ಕೊಂಡು ತಂದ ಬಿದಿರಿನ ಬೆಲೆ, ತಾವು ತಯಾರಿಸಿ ಮಾರಿದ ವಸ್ತುವಿನ ಬೆಲೆ, ತಮ್ಮ ಕೆಲಸದ ಕೂಲಿಇವೆಲ್ಲವುಗಳ ಲೆಕ್ಕವೂ ತೂಗಬೇಕಿದೆ. ಆ ತೂಗಿಸುವಿಕೆಯೇ ಅವರ ಬದುಕು.ಹೀಗೆ ತಯಾರಿಸಿದ ವಸ್ತುಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಅಂದುತಯಾರಿಸಿದ ವಸ್ತುವಿಗೆ ಅಂದೇ ಬೇಡಿಕೆಬರಬಹುದು/ಬರದಿರಬಹುದು. ಬೇಡಿಕೆಗಾಗಿ ಕಾಯುವ ತಾಳ್ಮೆಯು ಅವರಲ್ಲಿದೆ. ಆದರೆ ಹಾಗೆ ಕಾಯುತ್ತಾ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಒಮ್ಮೊಮ್ಮೆ ಹೊರ ರಾಜ್ಯದಿಂದಲೂ ಬೇಡಿಗೆ ಬರಬಹುದು. ಸ್ಥಳಿಯವಾಗಿಯೇ ಹೆಚ್ಚು ಮಾರಾಟವಾಗುವ, ಅದಕ್ಕಾಗಿ ಕಾಯುವ ಕಾಯಕ ಮಾತ್ರ ತಪ್ಪಿದ್ದಲ್ಲ. ಇದು ಸಂಪೂರ್ಣವಾಗಿ ಕರ ಕುಶಲತೆಯನ್ನೆ ಅವಲಂಬಿಸಿರುವುದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿಯುವುದು ಕಷ್ಟ. ಇಳಿದರೂ ಆಧುನಿಕ ತಂತ್ರಜ್ಞಾನಕ್ಕೆ ಮಾರು ಹೋದ ಜನ ಇಂಥಹ ವಸ್ತುಗಳ ಕಡೆ ಮುಖ ತಿರುಗಿಸುತ್ತಾರೆ.ಇತ್ತೀಚೆಗೆ ಇದನ್ನು ಮನಗಂಡ ತರುಣಿಯರು ತಂತ್ರಜ್ಞಾನಕ್ಕೆ ಸವಾಲೊಡ್ಡುವಂತೆ ಕೈ ಚಳಕತೋರುವಲ್ಲಿ ಮುಂದಾಗುತ್ತಿದ್ದಾರೆ. ಹೊಸ ಮಾದರಿಯ ಕೃತಕ ಹೂ ದಾನಿಗಳನ್ನು ತಯಾರಿಸುವುದು,ಸಮಾರಂಭಗಳಲ್ಲಿ ಸತ್ಕರಿಸುವ ಹಾರ, ಫಲ ಪುಷ್ಫಗಳನ್ನಿಡುವ ಚಿತ್ತಾರದ ಬುಟ್ಟಿ. ಮನೆ ಮುಂದೆಆಕರ್ಷಣೆಗೆ ಇಡುವ ಮಾದರಿಗಳನ್ನು ತಯಾರಿಸುತ್ತಾರೆ. ಸಂತಸದ ವಿಷಯವೆಂದರೆ ಇತ್ತೀಚೆಗೆ ತರಬೇತಿಯೊಂದಿಗೆ ಸ್ವ ಉದ್ಯೋಗ ಕಲ್ಪಿಸುವ ಕರ್ನಾಟಕ ಸರಕಾರದ ಕ್ರಿಯಾ ಯೋಜನೆಯಡಿಯಲ್ಲಿ ನೀಡುವ ತರಬೇತಿಯ ಲಾಭ ಪಡೆದ ಮಹಿಳೆಯರು ಜಾಗತೀಕರಣದ ಈ ಹೊತ್ತನಲ್ಲಿ ಸ್ಥಳೀಯ ಮಾರುಕಟ್ಟೆಯಿಂದ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡುವ ಸಾಹಸ ಮಾಡುತ್ತಿದ್ದಾರೆ. ತರಬೇತಿಯ ಲಾಭ ಪಡೆದು ಮಹಿಳೆಯರು- ಮಹಿಳೆಯರು ಧರಿಸುವಆಭರಣಗಳಾದ ಕಿವಿಯೋಲೆ, ಬೆರಳಿನ ಉಂಗುರ, ಹ್ಯಾಂಡ್ ಬ್ಯಾಗ್, ಪರ್ಸ್, ದೀಪದ ಕಂಬ ಇತ್ಯಾದಿಯಾಗಿ ತಯಾರಿಸಿ ರಾಷ್ಟಿಯ ಮಾರುಕಟ್ಟೆಯಲ್ಲಿ ತಮ್ಮ ಕರಕುಶಲ ವಸ್ತುಗಳಿಗೆ ಸ್ಥಾನ ಗಿಟ್ಟಿಸಿಕೊಒಳ್ಳುತ್ತಿದ್ದಾರೆ.ಇದಕ್ಕೆ ಸಾಕ್ಷಿಯಾಗಿ ಈ ಬಾರಿಯ ಹಂಪಿ ಉತ್ಸವದಲ್ಲಿ ಈ ವಸ್ತುಗಳಿಗೆ ಪ್ರದರ್ಶನಕ್ಕೆ ಅವಕಾಶ ಒದಗಿದ್ದು,ಎರಡು ಮಳಿಗೆಗೆ ಸರಕಾರ ಅವಕಾಶವನ್ನು ಕೊಟ್ಟಿದ್ದು. ಇದೆಲ್ಲವೂ ಸಾಧ್ಯವಾಗುವುದು ಮಹಿಳೆಯರು ತಾವು ತಮ್ಮ ಮನೆ ಕೆಲಸ, ಮಕ್ಕಳು ಎಲ್ಲವನ್ನೂ ನಿಭಾಯಿಸಿಕೊಂಡು ಹೊಟ್ಟೆ ಹೊರೆಯುವ ಇಂಥಹ ಸೂಕ್ಷ್ಮ ಕಾಯಕವನ್ನು ಮುಂದುವರಿಸಿಕೊಂಡುಹೋಗುತ್ತಿರುವುದರಿಂದ. ಇದು ಸಂಸ್ಕೃತಿಯಮುಂದುವರಿಕೆಯಾಗಿದೆ. ಅವರಿಗೆ ಸಂಕಷ್ಟಗಳಿಲ್ಲದಿಲ್ಲ.ಆದರೂ ಅದರ ನಡುವೆ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ, ಸಾಂಪ್ರದಾಯವನ್ನು ಬಿಡದೇ ಕಾಯುವ ಹೊಣೆಯನ್ನು ಈ ಮಹಿಳೆಯರು ಹೊತ್ತಿದ್ದಾರೆ.ಸಾಂಪ್ರದಾಯಿಕ ವೃತ್ತಿಯನ್ನು ಆಧುನೀಕರಣಕ್ಕೆಮುಖಾಮುಖಿಯಾಗಿಸುತ್ತಿದ್ದಾರೆ. ಜೊತೆಗೆ ಆರ್ಥಿಕ ಸ್ವಾವಲಂಬನೆಯೊಂದಿಗೆಸುಂದರವಾದ ಬದುಕಿನ ಕನಸನ್ನು ನನಸಾಗಿಸುವತ್ತ ದಾಪುಗಾಲಿಡುತ್ತಿದ್ದಾರೆ. ಮನೆಗಳಲ್ಲಿ ಹಿರಿಯರು ಮಾಡುವ ಕೆಲಸಗಳನ್ನುನೋಡುತ್ತಲೇ ಚಿಕ್ಕ ಮಕ್ಕಳು ತಾವೂ ಕತ್ತಿ ಹಿಡಿದು ಕೆಲಸಕ್ಕೆ ತೊಡುಗುವುದನ್ನು ನೋಡಿದರೆ ಯಾರೂ ಇಂಥಹ ಸಾಂಪ್ರದಾಯಿಕ ವೃತ್ತಿಗಳನ್ನು ಕಲಿಸಿ ಕೊಡುವ ಅಗತ್ಯವಿಲ್ಲ ಎನ್ನಿಸುತ್ತದೆ. ಎರಡು ಮೂರು ವರ್ಷದ ಮಕ್ಕಳು ಎತ್ತಲು ಆಗದ ಮರದ ಬೊಡ್ಡೆ ಹಿಡಿದುಕೊಂಡು ಕೈಯಲ್ಲಿ ಅಗತ್ಯವಿರುವ ಕತ್ತಿ ಹಿಡಿದು ಹಿರಿಯರನ್ನುಅನುಕರಿಸುವುದನ್ನು ನೋಡುತ್ತಿದ್ದರೆ ಒಮ್ಮೊಮ್ಮೆ ಭಯ ಆಗುತ್ತದೆ. ಕಾರಣ ಮಕ್ಕಳು ಅಪ್ಪಿ ತಪ್ಪಿ ಮೈ ಕೈ ಗೆ ಗಾಯ ಮಾಡಿಕೊಂಡಾರು ಎಂದು. ಆದರೆ ಆ ಹಿರಿಯರು ಅದನ್ನು ಗಮನಿಯೂ ಗಮನಿಸದವರಂತೆಇದ್ದು ಬಿಡುವುದನ್ನು ನೋಡಿದರೆ ಅಚ್ಚರಿಯೂಆಗುತ್ತದೆ. ಇವತ್ತಿಗೆ ನಮ್ಮ ಮನೆಗಳಲ್ಲಿ ಇಂಥಹ(ಕತ್ತಿಯಂತಹ) ವಸ್ತುಗಳನ್ನು ಮುಟ್ಟುವುದಿರಲಿಮಕ್ಕಳ ಕಣ್ಣಿಗೆ ಬೀಳುವಂತೆಯೂ ಇಡುವುದಿಲ್ಲ.ಆಯಾ ಸಾಂಪ್ರದಾಯಿಕ ವೃತ್ತಿಗಳನ್ನು ಕಿರಿಯರುಅನಾಯಾಸವಾಗಿ ಕಲಿಯುತ್ತಾರೆ ಎನ್ನುವುದಕ್ಕೆ ಇದು ನಿದರ್ಶನ. ಆದರೆ ಅವುಗಳನ್ನು ಮುಂದುವರಿಸುವ ಮನಸ್ಸು, ಇಚ್ಚೆ ನಮ್ಮಲ್ಲಿ ಇಲ್ಲದಿರುವುದು. ಮತ್ತದಕ್ಕೆ ಕಾರಣಗಳು ಹಲವು. ಅಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಹಿರಿಯರು ಕಿರಿಯರನ್ನು ಹಾಗೆ ಮುಂದುವರಿಯಲು ಬಿಡುತ್ತಿಲ್ಲ. ಹಾಗೆ ಹಿಂಜರಿಯುತ್ತಿರುವುದರಿಂದ ನಮ್ಮ ಸಾಂಪ್ರದಾಯಿಕ ವೃತ್ತಿಗಳು ಕಣ್ಮರೆಯಾಗುತ್ತಿವೆ. ಸರಕಾರವು ಹಾಗಾಗದಂತೆ ತಡೆಯಲು ವೃತ್ತಿ ಕೌಶಲ್ಯ ತರಬೇತಿ ನೀಡುತ್ತಿರುವುದು ಸ್ವಾಗತಾರ್ಹ. ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಸರಕಾರಿ ಕೆಲಸಸಿಗದಿರುವುದು, ಓದಿದ ಕಾರಣಕ್ಕೆ ಸಿಕ್ಕ ಸಣ್ಣ ಪುಟ್ಟ ಕೆಲಸ ಮಾಡಲು ಮನಸ್ಸು ಮಾಡದಿರುವ ಸಮಯದಲ್ಲಿ ಕೇವಲ ಅಕ್ಷರ ಜ್ಞಾನ ಪಡೆದುಕೊಂಡು ತಮ್ಮ ಬದುಕನ್ನು ಇನ್ನೊಬ್ಬರ ಸಹಾಯವಿಲ್ಲದೇ ತಾವೇ ನಿಭಾಯಿಸಲು ಸಹಕಾರಿಯಾಗುವಂತಹ ಈ ಕಾಯಕ ಸಮುದಾಯದ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಬದುಕಲುಸಹಕರಿಸಿದೆ. ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮನೆಯಪ್ರತಿಯೊಂದು ಕಾರಣಕ್ಕು ಗಂಡಸರಿಗೆ ಕೈ ಒಡ್ಡುವುದಿಲ್ಲ. ವಯಸ್ಸಿನ ಮಿತಿ ಇಲ್ಲದೇ ಅಬಾಲವೃದ್ಧರೂ ಕಾಯಕದಲ್ಲಿ ನಿರತರಾಗಿರುತ್ತಾರೆ. ಹೆಚ್ಚಿನ ಬಂಡವಾಳದ ಅಗತ್ಯವೂ ಇಲ್ಲ.ಬೇಕಾದರೆ ಕೆಲಸ ಮಾಡುವ/ಬಿಡುವ ಅವಕಾಶ ಅವರಿಗಿದೆ. ಹೊತ್ತು ಹುಟ್ಟುವಲ್ಲಿ ಪ್ರಾರಂಭವಾದ ಕೆಲಸ ತಮ್ಮ ಮನೆ ಕೆಲಸ ಮಾಡಿ ಕೊಳ್ಳುತ್ತಲೆ ಮುಂದುವರೆದು ಹೊತ್ತು ಮುಳುಗುವವರೆಗೂ ನಡೆದೇ ಇರುತ್ತದೆ. ಯಾರ ನಿಯಂತ್ರಣವೂ ಇಲ್ಲದೆ.ಒಟ್ಟಿಗೆ ಹೆಂಗಳೆಯರೆಲ್ಲರೂ ಒಂದೆಡೆ ಕೂತು, ಮಾತು, ಹರಟೆಗಳಲ್ಲಿ ದಿನದ ಗೇಯ್ಮೆಯೂ ಆಗುತ್ತದೆ.ಗೌರವದಿಂದ ಬದುಕಲು ಇನ್ನೇನು ಬೇಕು. ಸ್ವಾವಲಂಬಿ ಸ್ವಾಭಿಮಾನದ ಬದುಕಿಗೆ ಬಿದಿರು ಅದೆಷ್ಟು ಆಸರೆ. ಭಾರತಿ ಅಶೋಕ್  Sidebar Layout

ಬಿದಿರು ಕಾಯಕದಲ್ಲಿ ಮಹಿಳಾ ಸ್ವಾವಲಂಬನೆಭಾರತಿ ಅಶೋಕ್ ಅವರ ಲೇಖನ Read Post »

ಇತರೆ

ಸಾವಿಲ್ಲದ ಶರಣರು ಮಾಲಿಕೆಯಲ್ಲಿ-ಜಾನಪದ ವಿದ್ವಾಂಸ ಡಾ ಗುರುಲಿಂಗ ಕಾಪಸೆ

ಸಾವಿಲ್ಲದ ಶರಣರು ಮಾಲಿಕೆಯಲ್ಲಿ-ಜಾನಪದ ವಿದ್ವಾಂಸ ಡಾ ಗುರುಲಿಂಗ ಕಾಪಸೆ

ಸಾವಿಲ್ಲದ ಶರಣರು ಮಾಲಿಕೆಯಲ್ಲಿ-ಜಾನಪದ ವಿದ್ವಾಂಸ ಡಾ ಗುರುಲಿಂಗ ಕಾಪಸೆ Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಹೊಸ ಗಜಲ್

ಕೊಳದಿಂದ ಹೊರ ಬರಲಾರದೆ  ಚಡಪಡಿಸುತಿವೆ ಜೀವಿಗಳು
ಕಳಚಿಟ್ಟ ಉಡುಪುಗಳ ಕದ್ದು ಕಾಡಿಸಿದವ ಎಲ್ಲಿ ಹೋದೆ
ಪ್ರಭಾವತಿ ಎಸ್ ದೇಸಾಯಿ ಅವರ ಹೊಸ ಗಜಲ್

ಪ್ರಭಾವತಿ ಎಸ್ ದೇಸಾಯಿ ಅವರ ಹೊಸ ಗಜಲ್ Read Post »

You cannot copy content of this page

Scroll to Top