ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ
ಕುವೆಂಪು ನೆನಪಿನಲ್ಲಿ ನಳಿನಾ_ದ್ವಾರಕನಾಥ್ ಕುವೆಂಪು ಮಲೆನಾಡಿನ ಸೀಮೆಯಲ್ಲಿ ಹುಟ್ಟುಕರುನಾಡಿಗೆ ಸಾಹಿತ್ಯಸೇವೆ ಕೊಟ್ಟುಸಹ್ಯಾದ್ರಿಯ ಸೌಂದರ್ಯ ಸವಿಯುತಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರಭುವಿಯೊಳು ನಿಮ್ಮ ಹೆಸರು ಅಮರಶ್ರೀ ರಾಮಾಯಣ ದರ್ಶನಂ ಬರೆದರುಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ ಆಗು ನೀ ಅನಿಕೇತನನಮ್ಮೀ ನಾಡಿನ ಶ್ರೇಷ್ಠ ಕವಿಗೀ ನಮನವಿಶ್ವಮಾನವ ಸಂದೇಶದ ಅಭಿಯಾನವೈಚಾರಿಕತೆ ನಾಟಕಗಳೊಂದಿಗೆ ಯಾನ ರಾಷ್ಟ್ರ ಕವಿ ಎಂಬುವ ಬಿರುದಿನಿಂದಕುವೆಂಪು ಎಂಬ ಕಾವ್ಯನಾಮದಿಂದಹೆಸರಾದರು ಕನ್ನಡಮ್ಮನ ಕಂದನಾಗಿಉಸಿರಾಯಿತು ಕನ್ನಡವೇ ಜೀವವಾಗಿ ಮನುಜಮತ ವಿಶ್ವಪಥದ ಘೋಷಣೆಕನ್ನಡ ಕನ್ನಡಿಗರಿಗೆ ಮೊದಲ ಮನ್ನಣೆಭಾಷೆಯ ಮರೆತವನಾರು ಕನ್ನಡಿಗನಲ್ಲಕನ್ನಡಕ್ಕೆ ನಮಿಸಿ ನಡೆಯಲು ಸೋಲಿಲ್ಲ ಕವಿಶೈಲವಾಯ್ತು ಜನಿಸಿದ ಕುಪ್ಪಳ್ಳಿಯುಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿಯುಎಲ್ಲಾದರೂ ಇರು ನೀ ಎಂತಾದರೂ ಇರುಎಂದೆಂದಿಗೂ ಕನ್ನಡವಾಗಿರೆಂದು ಸಾರಿದರು ನಳಿನಾ_ದ್ವಾರಕನಾಥ್
ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ Read Post »









