ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ.ವೈ.ಎಂ.ಯಾಕೊಳ್ಳಿ

ತನಗ ಸಂಪದ


ಮಾತೆಂಬುದು ಬೆಳಕು
ಕತ್ತಲೆ ಕಳೆವುದು
ಮಾತಿಲ್ಲದ ಈ ಜಗ
ಅಂಧಕಾರವಪ್ಪುದು

ಸಂಸಾರವು ಸರ್ಕಸ್ಸು
ತಂತಿ‌ ಮೇಲಣ ಅಲೆ
ತೂಗಿ ನಡೆದರಷ್ಟೇ
ನಿರಾಳವು ಈ ಬಲೆ

ಮನದಲಿರುವದ
ಹೇಳದಿರು ಒಮ್ಮೆಲೆ
ಮುಚ್ಚಿಡುವದು ಕೂಡ
ಬಾಳ ಗೆಲ್ಲುವ ಕಲೆ

ಎಲ್ಲವೂ ತಿಳಿಯದು
ಒಂದು ಸಲ ಓದಿಗೆ
ಬಾಳಿನ ಪಠ್ಯವದು
ಕಠಿಣದ  ಹೊತ್ತಿಗೆ


 ನಿನ್ನ ನೀನು ಗೆಲ್ಲಲು
ಜಗವು ಸೋಲುವುದು
ಎಲ್ಲ ಸೋಲಿಪೆನೆಂದೆ
ಅಲ್ಲಿ ಗೆಲುವಿರದು


ಹಿರಿಯರ ನುಡಿಯು
ಅನುಭವ ಸಾಗರ
ಕಂಡುಂಡ ಸುಖ ದುಃಖ
ಮಾತು ರೂಪದ ಹಾರ

ಬರೆದಂಥ ಬರಹ
ಆಗುವದದು ಪಾಕ
ತಿದ್ದಿ ತೀಡಿದರಷ್ಟೇ
ಬದುಕು ಪರಿಪಾಕ

ಆಡುವ ಮಾತಿನೊಳು
ಇದ್ದರೆ ಸತ್ಯ ಭಾವ
ಮನ್ನಣೆ ಕೊಡುವದು
ಜಗತ್ತಿನ ಸ್ವಭಾವ

ಮಾತಿನಲಿ ತೋರಿಪ
ಕರುಣೆಯದು ಸುಳ್ಳು
ಎದೆಯಿಂದ ಬಂದರೆ
ಅಮೃತ ಸಮ ಪಾಲು
೧೯
 ಜೀವನದ ಹಾದಿಯು
ಸರಳವೇನಲ್ಲವು
ಕಲ್ಲು‌ಮುಳ್ಳು ತುಳಿದೆ
ಗಮ್ಯವ ಸಾಗಬೇಕು
೧೧
ಹರಿವ  ಸವಿಜೇನು
ಪ್ರೀತಿಯ ಕಾಮಧೇನು
ಒಲವಿನ ಹಾಲದು
ಸಿರಿ ಸ್ವರ್ಗ ಸಮನು
೧೨
ಬಹುದೆಲ್ಲ ಹೇಳದು
ಆಕಸ್ಮಿಕದ ನಡೆ
ತಡೆಯಲಸದಳ
ಉಣ್ಣಬೇಕಾದ ಎಡೆ


ಡಾ.ವೈ.ಎಂ.ಯಾಕೊಳ್ಳಿ

About The Author

3 thoughts on “ಡಾ.ವೈ.ಎಂ.ಯಾಕೊಳ್ಳಿಯವರ ತನಗ ಸಂಪದ”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ನೀತಿ ಶತಕಗಳಂತೆ ತುಂಬಾ ಅರ್ಥಪೂರ್ಣವಾದ ತನಗಗಳು ಸರ್
    ಧನ್ಯವಾದಗಳು

  2. ತುಂಬಾ ಸುಂದರ ಸರ್, ಕಿರಿದರಲ್ಲಿ ಹಿರಿದಾದ ಅಥ೯. -ವೀರಭದ್ರ ಕೌದಿ

Leave a Reply

You cannot copy content of this page

Scroll to Top