ನಾಗರಾಜ ಬಿ.ನಾಯ್ಕ.ಉಸಿರ ಆರಾಧನೆಗೆ…….
ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ. ಉಸಿರ ಆರಾಧನೆಗೆ……. ಪುಟ್ಟ ಮಗುವಿನ ಅಳುವಅಮ್ಮನ ಕಣ್ಣಲ್ಲಿ ಸಂತೈಸುವನಗುವೊಂದ ಪ್ರೀತಿ ಎನ್ನಲೇ……ಹಾರಿಹೋದ ಹಕ್ಕಿಯ ದಾರಿಯಕಾಯುತಿರುವ ಮರಿಗಳನೋಟವನ್ನು ಪ್ರೀತಿ ಎನ್ನಲೇ…..ನಡೆವ ನಿಧಾನ ನಡಿಗೆಗೆಆಧಾರವಾಗುವ ಪರಿಚಯದಹೆಗಲಿಗೆ ಪ್ರೀತಿಯೆನ್ನಲೇ…..ಮಾತಲ್ಲೇ ಮನ ಕರಗಿಸುವಸೋಜಿಗದ ಶಬ್ದಗಳಿಗೆಕಾವ್ಯ ಸೂಚಿಗೆ ಪ್ರೀತಿಯೆನ್ನಲೇ…..ಮಣ್ಣ ಕಣದಿ ಜೀವಿತದಒಲವಾಗಿ ಕುಳಿತಭರವಸೆಗೆ ಪ್ರೀತಿಯೆನ್ನಲೇ…..ದನಿಯಿರದ ಭಾವದಲಿಋಣಿಯಾದ ಒಲವಿಗೆಮೌನದಲ್ಲೂ ನಗುವಾದನಲಿವಿಗೆ ಪ್ರೀತಿಯೆನ್ನಲೇ……ಕರಗಿದ ಹೃದಯದ ಮಾತು ಜೇನುಮೌನ ಮಲ್ಲಿಗೆಯ ಹಾಡುಬೆವರ ಹನಿಯಹಿರಿಮೆಗೆ ಪ್ರೀತಿಯೆನ್ನಲೇ….ಆಪ್ತತೆಯ ಚೆಲುವಿಗೆಮನವರಳಿಸೋ ಗೆಲುವಿಗೆಉಸಿರ ಆರಾಧನೆಗೆಪ್ರೀತಿಯೆನ್ನಲೇ……… ನಾಗರಾಜ ಬಿ.ನಾಯ್ಕ. .
ನಾಗರಾಜ ಬಿ.ನಾಯ್ಕ.ಉಸಿರ ಆರಾಧನೆಗೆ……. Read Post »




