ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡ ರಾಜ್ಯೋತ್ಸವ ವಿಶೇಷ

ದಿವ್ಯ ದೀಪಗಳೇ

ಸವಿತಾ ಇನಾಮದಾರ್

ಕರುನಾಡಿನ ಅಮ್ಮಂದಿರೆ
ಪ್ರತಿ ಮನೆಯ ದಿವ್ಯ ದೀಪಗಳೇ
ಕನ್ನಡಾಂಬೆಯ ಸೇವೆ ಮಾಡೋಣ
ಕನ್ನಡದ ಇಂಪನು ಹಬ್ಬಿಸೋಣ.

ಗಡಿನಾಡೇ ಇರಲಿ, ಹೊರನಾಡೇ ಇರಲಿ
ಮನೆ – ಮನೆಯಿಂದಲಿ
ಕನ್ನಡಾಂಬೆಯ ತೇರು…
ಹೊರಡುವುದು ಬಲು ಹೆಮ್ಮೆಯಲಿ.

ಬೆಳವಡಿಯ ಮಲ್ಲಮ್ಮ, ಕೆಳದಿಯ ಚೆನ್ನಮ್ಮ,
ಅಬ್ಬಕ್ಕ, ಓಬವ್ವ, ಕಿತ್ತೂರ ಚನ್ನಮ್ಮ
ನಮ್ಮ ನಿಮ್ಮೆಲ್ಲರಲಿ ನೆಲೆಸಲಿ, ವೀರಗಾಥೆಯ ಜೋಗುಳ
ಕೇಳಿಸಲಿ.

ಪ್ರಕೃತಿ ಮಾತೆಯ, ಮಮತೆಯ ಮಡಿಲಲ್ಲಿ
ಕನ್ನಡಮ್ಮ ಕಿರು ನಗುತಿಹಳು…
ಸಾಹಿತ್ಯ – ಸಾಂಸ್ಕೃತಿಯ ಮಹಾಸಾಗರದಿಂದ
ಅನರ್ಘ್ಯ ಮುತ್ತಿನಸರ ಧರಿಸಿಹಳು.

ಕಣಕಣದಲ್ಲೂ ಕನ್ನಡ,
ಮನಮನದಲ್ಲೂ ಕನ್ನಡ.
ಮನೆಮನೆಯಲ್ಲೂ ಕೇಳಿ ಬರಲಿ ಕನ್ನಡದ ಸ್ವರಮಾಧುರ್ಯ.


ಸವಿತಾ ಇನಾಮದಾರ್

About The Author

3 thoughts on “ಸವಿತಾ ಇನಾಮದಾರ್-ದಿವ್ಯ ದೀಪಗಳೇ”

  1. ಸವಿತಾ ಕನ್ನಡ ರಾಜ್ಯೋತ್ಸವ ದಿನ ನಿಮಗೆ ಡಬಲ್ ಸಂತಸದ ದಿನ ಯಾಕೆಂದರೆ ಒಂದು ಮಾತೃಭಾಷೆ ದಿವಸ ಮತ್ತೊಂದು ಮಾತೋತ್ಸವದ ದಿವಸ ಇದಕ್ಕೆ ಅನ್ನೋದು ಡಬಲ್ ಧಮಾಕ ಅಂತ ಕನ್ನಡದ ಹಾಡು ತುಂಬಾ ಚೆನ್ನಾಗಿ ಬಂದಿದೆ ಅಭಿನಂದನೆಗಳು

    1. ನಿಮ್ಮ ಮೆಚ್ಚುಗೆಯ ನುಡಿಗಳಿಂದ ನನ್ನ ಆನಂದ ಇಮ್ಮಡಿ ಆಯಿತು…
      ಹೃತ್ಪೂರ್ವಕ ಧನ್ಯವಾದಗಳು.

Leave a Reply

You cannot copy content of this page

Scroll to Top