ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವೀಣಾ ನಿರಂಜನ್

ಬಿಡಿ ಬಿಡಿ ಚಿತ್ರಗಳು

 1

ಯುದ್ಧೋನ್ಮಾದದ ಕುರಿತು
ಬರೆದೆ ಒಂದು ಕವಿತೆ
ಮತ್ತೆ ಮತ್ತೆ ಓದಿ ಬೀಗಿದೆ
ಮರುಕ್ಷಣವೇ ವಿಷಾದವಾಯಿತು
ಹೀಗೆ ಬೀಗಿದ್ದಕ್ಕೇ ಅಲ್ಲವೆ
ಯುದ್ಧಗಳು ನಡೆಯುತ್ತಿರುವುದು 


2
ಯುದ್ಧದ ಕುರಿತು ಕವಿತೆಗಳನ್ನು ಬರೆದೆ
ಕೇಳಿದರು ಎಲ್ಲ ಎಂದಿನಂತೆ
ನೀನು ಅವರ ಪರವೊ
ಇವರ ಪರವೊ
ಉತ್ತರಿಸಿದೆ
ನಾನು ಯುದ್ಧ ವಿರೋಧಿ

  3

ಕವಿತೆಗಳು ಉಸಿರುಗಟ್ಟಿ
ಒದ್ದಾಡುತ್ತಿರುವಂತೆ ನಿನ್ನೆ ಕನಸಾಯಿತು
ಎಷ್ಟು ಉಪಚರಿಸಿದರೂ
ಚೇತರಿಸಿಕೊಳದೆ ನರಳ ತೊಡಗಿದವು
ಏನೆಂದು ವಿಚಾರಿಸಿದಾಗ ಗೊತ್ತಾಯಿತು
ಯುದ್ಧ ಭೂಮಿಯಲ್ಲಿ ಕವಿತೆಗಳು
ಅರಳುವುದಿಲ್ಲ ಎಂದು


ವೀಣಾ ನಿರಂಜನ್

About The Author

4 thoughts on “ವೀಣಾ ನಿರಂಜನ್ ಕವಿತೆ-ಬಿಡಿ ಬಿಡಿ ಚಿತ್ರಗಳು”

Leave a Reply

You cannot copy content of this page

Scroll to Top