ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನ ಸಂಗಾತಿ

ಮಕ್ಕಳೆಂದರೆ ಬದುಕು

ಲಲಿತಾ ಕ್ಯಾಸನ್ನವರ

ಮಕ್ಕಳೊಂದಿಗೆ ಮಕ್ಕಳಾಗುವ ಬಗೆ ಅವಿನಾಭಾವ ಸಂತ್ರುಪ್ತಿ, ಮಕ್ಕಳೆಳಮಗೆ ಬದುಕು.
ಆಧುನಿಕ ಜಗತ್ತಿನಲ್ಲಿ ಎಲ್ಲವೂ ಗ್ಯಾಜೆಟ್ ಗಳ ಮೇಲೆಯೇ ನಡೆಯುತ್ತಿದೆ, ಯಾರಿಗೂ ಸಮಯವಿಲ್ಲ, ಅವರಿಗೆ ಅವರವರದೇ ಒತ್ತಡ, ಇಂಥದರಲ್ಲಿ ಮಕ್ಕಳು ಆಟಗಳನ್ನು ಮರೆತು ಬರಿ ಗೆಜೆಟ್ ಗಳ ಸುತ್ತಲೇ ಸುತ್ತುತ್ತಿದ್ದಾರೆ ಆದ್ದರಿಂದ ಅವರನ್ನು ವಾಸ್ತವಿಕ ಜಗತ್ತಿಗೆ ಕರೆತಂದು ಅವರ ಮುಗ್ಧತೆಗೆ ಭಾಷ್ಯಕೊಡಬೇಕಾದರೆ ನಾವು ಮಕ್ಕಳೊಂದಿಗೆ ಮಕ್ಕಳಾಗಲೇಬೇಕು.‌ಅವರ ಆಟ ಪಾಠ ಹುಸಿಕೋಪ,ನಗು ಅಳು ಹಠ ಮುಗ್ಧತೆಗೆ ನಾವು ತಲೆದೂಗಿ ನಾವು ಅವರಂತೆ ಅವರೊಂದಿಗೆ ಮಗುವಾಗಿ ಅವರ ಭಾವನೆಗಳಿಗೆ ಸ್ಪಂದಿಸಬೇಕು.

ಇದರಿಂದ ಮಕ್ಕಳಿಗಷ್ಟೇ ಅಲ್ಲ ನಮಗೂ ಕೂಡ ಉಪಯೋಗವಿದೆ, ಇದು ಹಗುರದ ಕೆಲಸವಲ್ಲ ಆದರೆ ಇದನ್ನು ನಾವು ಅನುಭವಿಸಬೇಕು , ಮಕ್ಕಳು ಮಾಡುವ ತುಂಟಾಟಕ್ಕೆ ಸಂತಸ ಪಡಬೇಕು, ತಪ್ಪಿದಾಗ ತಿದ್ದಿ ಬುದ್ಧಿ ಹೇಳಬೇಕು. ಇದರಿಂದ ನಮ್ಮ ಅನೇಕ ಮಾನಸಿಕ ಕಾಯಿಲೆಗಳು ದೂರವಾಗಿ ನಾವು ಕೂಡ ಆರೋಗ್ಯವಂತರಾಗುತ್ತೇವೆ ಮಕ್ಕಳು ಮಕ್ಕಳಾದಾಗ ಬಹಳ ಚಂದ ,ಅವರಿಗೆ ನಮ್ಮಂತ ದೊಡ್ಡವರ ಸಹಕಾರ ಸಿಕ್ಕರೆ ಇನ್ನೂ ಚೆಂದ ಅವರ ಮುಗ್ದತೆಗೆ ಬೆಲೆ ಕಟ್ಟಲಾಗುವುದಿಲ್ಲ,, ಅದನ್ನು ಅನುಭವಿಸಬೇಕು. ತಾಯಿ ಮಗುವಿನ ತೊದಲುನುಡಿಯನ್ನು ಆಲಿಸಿ ಖುಷಿಪಡುವಂತೆ ಶಾಲೆಯಲ್ಲಿ ಶಿಕ್ಷಕರು ಒಂದೇ ಅಕ್ಷರ ಕಲಿತರು ಆ ಮಗುವಿನ‌ ಕಲಿಕೆಯನ್ನು, ಆ ಮಗುವನ್ನು ತುಟಿ ಗಲ್ಲ ಹಿಡಿದು ಮುದ್ದು ಮಾಡಿ ಶಭಾಷ್ ಎಂದು ಹೇಳಿ ಖುಷಿ ಪಡುತ್ತಾರೆ ಆಗ ಆ ಮಗುವಿನ ಕಲಿಕೆ ತಾಯಿ ಮಗುವಿನ ಸಂಬಂಧದಂತೆ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯುತ್ತದೆ ಆದ್ದರಿಂದ ಇತ್ತೀಚಿನ ವೈಜ್ಞಾನಿಕ ಆವಿಷ್ಕಾರಗಳು ಕೂಡ ಪ್ರತಿದಿನ ಎರಡು ಗಂಟೆಗಳ ಕಾಲ ಮಕ್ಕಳೊಂದಿಗೆ ಇಲ್ಲವೇ 60 ವರ್ಷ ದಾಟಿದ ಹಿರಿಯರೊಂದಿಗೆ ಮನಬಿಚ್ಚಿ ಕಾಲ ಕಳೆಯಬೇಕೆಂದು ಹೇಳಿದ್ದಾರೆ.

————

ಲಲಿತಾ ಕ್ಯಾಸನ್ನವರ.

About The Author

Leave a Reply

You cannot copy content of this page

Scroll to Top