ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಗಜಲ್

ಮನದಿ ಹುದುಗಿದ ಬಯಕೆಯ ಲತೆ ಚಿಗುರಿಸಿದವರು ನೀವಲ್ಲವೆ
ಮುದ್ಧಿಸಿ ಲಜ್ಜೆಯ ಪರದೆ ಸರಿಸಿ ನಗಿಸಿದವರು ನೀವಲ್ಲವೆ

ಬಳ್ಳಿ ಹುಲುಸಾಗಿ ಬೆಳೆಯಲು ಅನುರಾಗದ ಆಸರೆ ಬಯಸಿತು
ಒಲವಲಿ ಬಂಧಿಸಿ ತೋಳಬಂದಿ ತೊಡಸಿದವರು ನೀವಲ್ಲವೆ

ಮರಳುಗಾಡಲಿ ಪರಿಮಳದ ಸುಮ ಅರಸುತ ಬಳಲಿ ಬೆಂಡಾದೆ
ಸಂತಸದ ಕಂಪು ಸೂಸುವ ಹೂ ಮುಡಿಸಿದವರು ನೀವಲ್ಲವೆ

ಶೋಕ ಸಾಗರದಿ ಮುಳುಗಿ ಏಕಾಂಗಿಯಾಗಿದೆ ಮನವು ಇಂದು
ಪ್ರೇಮ ಲೋಕಕ್ಕೆ ಪಟ್ಟದರಸಿ ಮಾಡಿದವರು ನೀವಲ್ಲವೆ

ಅಮವಾಸ್ಯೆಯ ಇರುಳು ಗಗನದಲ್ಲಿ ಶಶಿಯ ಹುಡುಕುತಾ ಹೊರಟೆ
ಚಂದಿರನಾಗಿ ಹೃದಯ ಕಡಲು ಉಕ್ಕಿಸಿದವರು ನೀವಲ್ಲವೆ

ಜಗದ ಜಾತ್ರೆಯಲಿ ಮೂಕಿಯಾಗಿ ನೋವುಂಡು ಬಾಳಿದ ಜೀವ
ಪಿಸುಮಾತಲಿ ಪ್ರೀತಿ ರಾಗವ ನುಡಿಸಿದವರು ನೀವಲ್ಲವೆ

ಗಾಣದ ಎತ್ತಿನಂತೆ ಸುತ್ತಿದೆ ಮಾಯಬಟ್ಟೆ ಕಟ್ಟಿಕೊಂಡು
ಮೋಹವ ಅಳಿಸಿ ದಿವ್ಯ” ಪ್ರಭೆ” ತೋರಿಸಿದವರು ನೀವಲ್ಲವೆ


ಪ್ರಭಾವತಿ ಎಸ್ ದೇಸಾಯಿ

About The Author

Leave a Reply

You cannot copy content of this page

Scroll to Top