ಕಾವ್ಯಸಂಗಾತಿ
ನಳಿನಾ ದ್ವಾರಕನಾಥ್
ಮಲ್ಲಿಗೆ

ಮೊಗ್ಗೊಂದು ಅರಳಿ ಹೂವಾಗಿರಲು
ಸೆಳೆದಿದೆ ಸುವಾಸನೆಯ ಘಮಲು
ಹಸಿರ ಗಿಡದಲ್ಲಿ ಮೆಲ್ಲಗೆ ಮುದುಡಿದ್ದೆ
ಪಸರಿಸಿ ಮಲ್ಲಿಗೆ ಕಂಪನಲಿ ಸೊಂಪಾದೆ
ಅದೇನು ಚಂದವೇ ನೀ
ಬಿರಿದು ನಗುತಿರಲು
ಒಲವನೂರಿಗೆ ಕರೆದೊಯ್ಯುತಿರುವೆ
ನೆನಪಿನ ಹೊಸಗೆಯ ನೀ ತಂದಿರುವೆ
ಅದೆಷ್ಟು ಮೋಹಕವೇ ನೀನು
ಕ್ಷಣಮಾತ್ರದಿ ಸೆಳೆವೆ ಎಲ್ಲರನು
ಅನುಬಂಧ ಹೆಚ್ಚಿಸುವ ಯುಕ್ತಿಯು ನಿನ್ನಲಿ
ಬಾಡಿದರೂ ಬಿಡಲಾರೆ ನಿನ್ನ ಕಂಪನು
ಮುಡಿಗೇರಿರಲು ನೀ ಆಕರ್ಷಕ
ಆ ಮುಡಿಯ ಸ್ಪರ್ಶದಲ್ಲಿದೆ ಮೋಹಕ
ಶ್ವೇತ ವರ್ಣದ ಪುಷ್ಪವೇ ನೀನು
ಆ ಹೆಸರೇ ಚೆಲುವ ಮಲ್ಲಿಗೆಯಲ್ಲವೇನು
ನಳಿನಾ_ದ್ವಾರಕನಾಥ್





ಚಂದದ ಕವನ ರಚನೆ