ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸರೋಜಾ ಜಾದವ್

ಹಲ್ಲು ಮತ್ತು ಕಡಲೆ

ಹುರಿಗಡಲೆ ತಿನ್ನಬೇಕೆಂಬ ಆಸೆ ಇತ್ತು
ಕಡಲೆ ಸಿಗಲೇ ಇಲ್ಲ
ಈಗ ಸಿಕ್ಕಿದೆ
ತಿನ್ನಲು ಹಲ್ಲೆ ಇಲ್ಲ
ತುಳುಕುವ ಯೌವ್ವನವಿತ್ತು
ಕಣ್ಣುಗಳು ಕನಸಿನಿಂದ
ತುಳುಕುವ ಕಾಲವಿತ್ತು
ಕೈ ಹಿಡಿದಾತ ತುಂಬಾ ಜಾಣ
ಒಂದು  ಪೈಸೆ ಕೈಬಿಡದಂತೆ
ಬದುಕು ಸಾಗಿಸುವ ಕಲೆಗಾರ
ಅಂದುಕೊಂಡಳು ಆಕೆ
ನನ್ನ ಕನಸುಗಳ ಕೊಂದ ಕೊಲೆಗಾರ
ಮಗಳಿಗೆಂದಳು ಪ್ರತಿಕ್ಷಣದ ಸಂತಸವ
ಬೊಗಸೆಯಲ್ಲಿ ಹಿಡಿದಿಟ್ಟುಕೋ
ಸಣ್ಣ ಸಣ್ಣ ಆಸೆಗಳ ಕಡೆಗಣಿಸದಿರು
ಒಂದೇ ಒಂದು ಸಿನಿಮಾ
ಒಂದೇ ಒಂದು ತೀರ್ಥಕ್ಷೇತ್ರ
ಒಂದೇ ಒಂದು ಮೊಳ ಮಲ್ಲಿಗೆ
ಏಕಾಂತದಲ್ಲಿ ಗಂಡನೊಡನೆ
ಹೃದಯದಲ್ಲಿ ಪಿಸುಗುಟ್ಟುವ
ಮಾತುಗಳ ಮೌನ ಮುರಿದು
ಹಂಚಿಕೋ ಈ ಕ್ಷಣ ಬಾರದು ಮತ್ತೆ
ಹಲ್ಲು ಕಡಲೆ ತಾವೇ ಬರುವುದಿಲ್ಲ


ತಂದುಕೊಳ್ಳಬೇಕು ನಾವೇ
ಮಗನಿಗೆಂದಳು ಕರೆದುಕೊಂಡು
ಹೋಗು ಸೊಸೆಯನ್ನು
ಅನುಭವಿಸಬೇಕು ಪ್ರತಿಕ್ಷಣದ ಸಂತೋಷವನ್ನು
ತಂಗಾಳಿಯ ತಂಪಿನಲ್ಲಿ
ಭವಿಷ್ಯದ ಸಂತಸವ ಹಂಚಿಕೊಳ್ಳಿ
ಅಳಿಯ ಮಗಳು ಮಗ ಸೊಸೆ
ದೂರ ಹೋಗುವವರೆಗೆ
ಕಣ್ತುಂಬಿ ಕೊಂಡಳು
ನಡೆದಳು ಒಳಗೆ ಕೆಮ್ಮುತ್ತಾ ಮಲಗಿದ
ಗಂಡನಿಗೆ ಕಷಾಯ ಮಾಡಲು

———————-

ಡಾ ಸರೋಜಾ ಜಾದವ್

About The Author

Leave a Reply

You cannot copy content of this page

Scroll to Top