ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಮೈತ್ರಿ ನಮ್ಮದು

ಯಾವ ಜನ್ಮದ
ಮೈತ್ರಿ ನಮ್ಮದು
ನನ್ನ ನಿನ್ನ ಮಿಲನವು

ಯಾವ ಘಳಿಗೆಯ
ಚೆಲುವು ನೋಟವು
ನಮ್ಮ ಪ್ರೀತಿಯ ಮಾಟವು

ಯಾವ ಕ್ಷಣದ
ರವಿಯ ಕಿರಣವು
ಕಡಲ ತಾವರೆ ಅರಳಿತು

ಯಾವ ತೋಟದ
ಹೂವು ಪರಿಮಳ
ಸ್ನೇಹ ಜೇನು ಕಟ್ಟಿತು

ಯಾವ ಗಗನದ
ಚುಕ್ಕಿ ಬೆಳಕು
ಬೆಳಗು ತಂದಿತು ಬಾಳಲಿ

ಯಾವ ಕಾಡಿನ
ಪೊದರ ಹಕ್ಕಿಯ
ಮಧುರ ಇಂಚರ ಗಾನವು

ಯಾವ ಭಾವದ
ಒಲವ ಚಿಲುಮೆ
ಸ್ಫೂರ್ತಿ ಪ್ರೇಮ ಚಿಮ್ಮಿತು

ಯಾವ ಕಾವ್ಯದ
ಭಾಷೆ ನೀನು

ದೂರ ಪಯಣದ ಹೆಜ್ಜೆಯು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

23 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಮೈತ್ರಿ ನಮ್ಮದು”

  1. ಯಾವ ಜನ್ಮದ ಮೈತ್ರಿ ನಮ್ಮದು…
    ಸುಂದರವಾದ ಸ್ನೇಹದ ಹರವನ್ನು ವ್ಯಕ್ತಪಡಿಸುವ ಕವನ….

    ಸುಶಿ

  2. ಅತ್ಯಂತ ಸುಂದರ ಭಾವ ಪ್ರಜ್ಞೆ ತಮ್ಮ ಕವನದಲ್ಲಿ ಮೂಡಿ ಬಂದಿದೆ ಸರ್

    ದೀಪಾ

  3. ಡಾ ಶರಣಮ್ಮ ಗೋರೆಬಾಳ

    ಹೊಸ ಭರವಸೆಯ ಬೆಳಕು ಚೆಲ್ಲಿದ ಕವನ ಚೆನ್ನಾಗಿದೆ ಸರ್

  4. ಡಾ ಕಸ್ತೂರಿ ದಳವಾಯಿ ಗದಗ

    ಮಂದಾನಿಲವಾಗಿ ಬೀಸಿ ತಂಪನೀಯುವ ಪ್ರೀತಿ ಮೀಮಾಂಸೆಯು ಕವಿ ಮನದಾಳದಲ್ಲಿ ಗರಿ ಗೆದರಿ ಬಿಚ್ಚಿ ಸ್ವಚ್ಛಂದ ಬಂಧ ಈ.ಕವನದ ಆಶಯವಾಗಿದೆ ಸರ್

  5. ಪ್ರೊ ಲಕ್ಷ್ಮಿ ಕಾಯಕದ

    ಭಾವ ಲೋಕದಲ್ಲಿ
    ಭಾವನೆಗಳ ಹಂಚಿಕೆ
    ಭಾವ ಪರವಶ ದ
    ಕವನ ಸರ್

    ಪ್ರೊ ಲಕ್ಷ್ಮಿ ಕಾಯಕದ ಗದಗ


  6. ಸ್ನೇಹ ಭಾವದ ಚೆಲುವಿಕೆ ಸುಂದರ ಕವನ


    ಡಾ ಲಲಿತಾ ರಶ್ಮಿ

  7. ಸುಂದರವಾದ ಸ್ನೇಹ ಭಾವ ತುಂಬಿದ ಕವನ ಸರ್

    ಜಯಶ್ರೀ ಪಾಟೀಲ

  8. ಸೂಪರ್ ಕವನ ಕಾವ್ಯ ಸರ್
    ಇವತ್ತಿನ ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಗುಣ ಲಕ್ಷಣಗಳು ಕಾಣುತ್ತಿವೆ

    ವಿಜಯಲಕ್ಷ್ಮಿ ಪಾಟೀಲ

  9. ನಮ್ಮೆಲ್ಲರಿಗೂ ಕವನ ಕಾವ್ಯ ಕೂಟದ ತರಬೇತಿ ನೀಡಿ ಸಾಹಿತ್ಯ ರಚನೆಗೆ ನಿಮ್ಮ ಕೊಡುಗೆ ಅಪಾರ

    ಜಯದೇವಿ ಬೀದರ

  10. ಅದ್ಭುತ ಲೋಕದಲ್ಲಿ ಇಣುಕಿದಂತ ಭಾವಯಾಣ

    ಜಯಶ್ರೀ ಭಂಡಾರಿ ಬಾದಾಮಿ

  11. ಮೃದು ಮಧುರ ಮೈತ್ರಿಯಲ್ಲಿ ಮನದುಂಬಿ ಮೈ ಮರೆತ ಕವಿಮಿತ್ರ ಮನಸಿಗೆ ಶರಣು…..

Leave a Reply

You cannot copy content of this page

Scroll to Top