ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾವ್ಯ ಸುಧೆ ರೇಖಾ

ಅಂತರ್ಮುಖಿ

ನಿನ್ಹೆಸರ ಮೋಹದಲಿ ಮರೆತೆ ನಾ ನನ್ನನೆ
ಮಾತಿರದೆ ಮೌನವಾದೆ ಅವರಿವರ ಪಾಲಿಗೆ
ನನ್ನೊಳಗನು ಕಂಡುಕೊಳ್ಳುವ ಪರಿಗೆ ಸೋತೆನೆ
ಶರಣಾದೆ ಹಗಲಲ್ಲೂ ನಿನ್ನದೇ ಕನಸಿಗೆ……

ಕನವರಿಕೆ ಸುಮ್ಮನೆ ಅಳಿದುಳಿದ ನಾಳೆಗಳಿಗೆ
ಮಧುರ ಸಿಹಿ ನೆನಪಲಿ ಅಂತರ್ಮುಖಿಯಾದೆನೆ
ಅರಿಯದಿರೆ ಬೇಡಬಿಡು ಮನವರಿಕೆ ಕಡೆಗೆ
ಕಾತುರದಿ ಬರುವಿಕೆಗಾಗಿ ಕಾದು ಕುಳಿತಿಹೆನೆ….

ಹೊಸಕಿಹೋದ ಹೃದಯ ವೇದನೆ ತಾಳೆನೆ
ಬಲ್ಲೆ ಒಲ್ಲನವನು ಸೋಲುವಾಸೆ ಯಾಕ್ಹೀಗೆ
ಕಣ್ಣೆದುರು ಮನದಲ್ಲಿ ಮತ್ತವನೆ ಬಂದನೆ
ಹಾಳು ಜಾಡಿನಲಿ ಸಿಲುಕಿದೆನೆ ಕೊರಗಿಗೆ…..!!


ಕಾವ್ಯ ಸುಧೆ. ( ರೇಖಾ )

About The Author

2 thoughts on “ಕಾವ್ಯ ಸುಧೆ ರೇಖಾ ಕವಿತೆ-ಅಂತರ್ಮುಖಿ”

  1. ಅದ್ಭುತ ಅಮೋಘ ಸುಂದರ ಕವನ ರಚನೆ ಕಾವ್ಯ ಸುದೆ

    ಶ್ರೀಪಾದ

Leave a Reply

You cannot copy content of this page

Scroll to Top