ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್-

ಗಝಲ್

ಮರಳಲಿ ಸುಂದರ ಕಲಾಕೃತಿಯೊಂದು
ಮೂಡುತಿದೆ ನೋಡು
ಕರದಲಿ ನಿದ್ರಿಸಿಕನಸಿನ ಲೋಕದಲಿ
ಹಾಡುತಿದೆ ನೋಡು

ತರಳನು ನಸುನಗುತಿಹನೇ ಮೆತ್ತನೆಯ
ಮಡಿಲಲಿ ಮಲಗಿ
ಬೆರಳನು ಗಲ್ಲದಮೇಲಿರಿಸಿ ಮೆಲ್ಲಗೆ
ತೀಡುತಿದೆ ನೋಡು

ಸಾಗರದ ಅಲೆಯಬ್ಬರಕೆ ಬೆದರದೆ
ಶಾಂತವಾಗಿ ಪವಡಿಸಿರುವೆ
ತೂಗಿರುವೆ ತೊಟ್ಟಿಲನು ಜೋಗುಳದಲಿ
ದೂಡುತಿದೆ ನೋಡು

ಕಲಾವಿದನ ಕುಂಚದಲಿ ಅರಳಿದೆ
ಅದ್ಭುತ ಭಾವಗಳಲಹರಿ
ಕಲೆಯ‌ ವೈಭವದತೆರೆಯು ಅಂದದಿ
ಕೂಡುತಿದೆ ನೋಡು

ಕದ್ದಿರುವೆ ಎದೆಯ ಮಾತೃಪ್ರೇಮವನು
ಸದ್ದಿಲ್ಲದೇ ರಾಧೆಯಲಿ
ಮುದ್ದುಕಂದನ ನೋಡುತಲಿ ವಾತ್ಸಲ್ಯ
ಮೂಡುತಿದೆ ನೋಡು


ಅನುರಾಧಾ ರಾಜೀವ್ ಸುರತ್ಕಲ್

About The Author

Leave a Reply

You cannot copy content of this page

Scroll to Top