ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಇರುಳು..

ಹಗಲು ನುಂಗಿ
ಪೋಷಾಕು ಧರಿಸಿ
ಧ್ಯಾನದಲಿರುವಂತೆ
ನೀರವ ಮೌನಿ ಈ ಇರುಳು

ವೇಷ ಮರೆಸಿದ
ಗುಪ್ತಚರನಂತೆ
ರಹಸ್ಯಗಳೆಲ್ಲವ
ಭೇದಿಸುವದೀ ಇರುಳು…

ಕದ್ದು ಮುಚ್ಚಿ
ಆಟವಾಡುವ
ಬೆತ್ತಲೆಗಳಿಗೆ
ಕಾವಲುಗಾರ ಈ ಇರುಳು…

ಮೋಸದ ಮೂಟೆಗಳ
ಕದ್ದೊಯ್ದು ಅಡಗಿಸುವ
ಸಭ್ಯರ ಸೋಗಿಗೆ
ಕೈ ಜೋಡಿಸುವುದೀ ಇರುಳು…

ನಸುಕು ತುಸು
ಮೂಡುತ್ತಲೇ
ಪೋಷಾಕು ಕಳಚಿ
ಮಂಗಮಾಯ ಈ ಇರುಳು…


ಹಮೀದಾ ಬೇಗಂ ದೇಸಾಯಿ

About The Author

Leave a Reply

You cannot copy content of this page

Scroll to Top