ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ-
ಪ್ರಪಂಚ ಪರ್ಯಟನ

ಪ್ರವಾಸೋದ್ಯಮದ ಸಹವಾಸ
ತಿಳಿದರಿವ ಜ್ಞಾನದಲ್ಲಿ ಆದ ದಾಸ
ದೇಶ ವಿದೇಶ ಸುತ್ತಿ ನೋಡೊಮ್ಮೆ
ಜಗದ ಕೋಶ ಓದಿ ತಿಳಯೊಮ್ಮೆ
ವಿಧ ವಿಧ ಇತಿಹಾಸನೊಳಗೊಂಡ ವಿಶ್ವ
ಸಂಸ್ಕೃತಿಯ ವಿನ್ಯಾಸಗಳೇ ಅಲ್ಲಿಯ ಅಶ್ವ
ಹೊಸತನವ ಹೊಸೆದ ಸುಂದರ ಪರಿಸರ
ಮನಕೆ ಮುದ ನೀಡುವ ಧರೋಹರ
ಋತುಮಾನಕೆ ತಕ್ಕ ಸುಂದರ ತಾಣಗಳ ಆಗರ
ಕಣ್ಮನ ಗೆಲ್ಲುವ ದ್ವೀಪಗಳ ಮಹಾಸಾಗರ
ಪ್ರತಿದೇಶದ ಮಣ್ಣು ಕಲ್ಲಿನಲ್ಲಿನ ಸೌಗಂಧ
ಬದುಕಿಗೊಂದು ಹೆಣೆದ ಕಲೆಯೆ ಚೆಂದ
ವಿಶ್ವ ಜಾಗೃತಿಯ ಚಿಂತನ ವಿಶ್ವದಲ್ಲಿ
ನವ ಉದ್ಯೋಗ ಸೃಷ್ಟಿಸುವ ಪೈಪೋಟಿಯಲ್ಲಿ
ಆರ್ಥಿಕ ವಿಕಾಸ ಬೆಳೆಸುವ ಚಾತುರ್ಯತೆ
ವಿಶ್ವದಲ್ಲಿ ಸ್ನೇಹ ಶ್ಲಾಘನೆಯ ಕುಟಿಲತೆ
ಸುಲೋಚನಾ ಮಾಲಿಪಾಟೀಲ




