ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ ಕವಿತೆ-

ಎಲ್ಲಿರುವೆ

ಎಲ್ಲಿರುವೆಯೋ ನಾ ಕಾಣೆ
ಹೇಗಿರುವೆಯೋ ನಾ ಕಾಣೆ
ಬರುವೆನೆಂದು ಹೊರಟೆ
ಮತ್ತೆ ಬಾರದೆ ನೀ ಹೋದೆ

ಗಿಡ ಮರಗಳೆ ನೋಡಿದಿರಾ
ಅವನ ದನಿಯನು ಕೇಳಿಹಿರಾ
ಅರಳಿಹ ಸುಮಗಳೇ ಕಂಡಿರಾ
ಶಶಿವದನನ ಮಾತನು ಆಲಿಸಿದಿರಾ

ಕಾನನದ ನಡುವೆ ಹುಡುಕಿದೆನು
ಕಾಣಲೇ ಇಲ್ಲ ನನ್ನವನು
ಬೆಟ್ಟಗುಡ್ಡಗಳಲಿ ಅರಸಿದೆನು
ನೋಡಲಾಗಲಿಲ್ಲ ಅವನನ್ನು

ಹೇ ಮುದ್ದು ಪಾರಿವಾಳವೆ ಕೇಳೇ
ಕೊಡುವೆನು ನಿನ್ನಲೊಂದು ಓಲೆ
ತಲುಪಿಸು ಅವಗೆ ಪ್ರೀತಿಯ ಸಾಲು
ನನ್ನಲಿ ಕರುಣೆಯ ತೋರಲು ಹೇಳು

ಕಾದಿರುವೆ ಗೆಳೆಯನೆ ನಿನಗಾಗಿ
ನೀ ಹರಿಸುವ ಒಲವ ದಾರೆಗಾಗಿ
ಅಳಿಸಿಬಿಡು ಮನದ ನೋವನು
ಸೇರಿಬಿಡು ಹೃದಯ ಮಂದಿರವನು


ಪರಿಮಳ ಐವರ್ನಾಡು ಸುಳ್ಯ

About The Author

1 thought on “ಪರಿಮಳ ಐವರ್ನಾಡು ಸುಳ್ಯ ಕವಿತೆ-ಎಲ್ಲಿರುವೆ”

  1. ಪ್ರತಿಯೊಂದು ಸಾಲುಗಳು ಗೆಳೆಯನಿಗಾಗಿ ಪರಿತಪಿಸುತ್ತಿದೆ…

Leave a Reply

You cannot copy content of this page

Scroll to Top