ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ಸುನೀಲ್ ಕುಮಾರ್ ಎಸ್.

ಗಜಲ್

ಮಳೆನೀರು ಕಳೆಕಟ್ಟುವ ನಾಡಿನಲಿ ಇಳೆ ಅಳುತ್ತಿದೆ ನೋಡು
ಮಂಜು ಬಿಂದುಗಳು ಅಳುಮುಂಜಿಯಾಗಿ ರಕ್ತ ಹರಿಸುತ್ತಿದೆ ನೋಡು

ನಿಸರ್ಗ ಇಲ್ಲಿ ಸಗ್ಗವಾದರೂ ಕೊರಳಿಗೆ ಬಿಗಿದರಿಲ್ಲಿ ಹಗ್ಗ
ಸನ್ಮಾರ್ಗ ದುರ್ಗಮವಾಗಿ ಮಾನವ ಮೌಲ್ಯಗಳು ಬೆತ್ತಲೆಯಾಗುತ್ತಿದೆ ನೋಡು

ಜೀವಸೆಲೆ ಕೈಬೀಸಿ ಕರೆದರೂ ಜನಭಾವ ಭಯಭೀತಿಯಲಿ ಬಿಕ್ಕುತ್ತಿದೆ
ಹೊಳೆಗಳೋ ಅಗ್ನಿಕುಂಡಗಳೋ ರಕ್ಕಸ ಕೆನ್ನಾಲಿಗೆಗಳು ಲಾವಾ ಕಾರುತ್ತಿದೆ ನೋಡು

ಶಾಂತಿಧಾಮದಿ ಮಾರಣ ಹೋಮದ ಧೂಮ ಕರಕಲಾಗಿಸಿದೆ ಮೈಮನಗಳನು
ರುಂಡ-ಮುಂಡಾದಿ ಚದುರಿ ರೌದ್ರ ಪೈಶಾಚಿಕತೆ ಮೆರೆಯುತ್ತಿದೆ ನೋಡು

ಹುಚ್ಚು ಮನಗಳ ಶಮನ ದಮನಕೆ ರಾಹುಕಾಲದ ಧೂಮಕೇತು ಅಡ್ಡಪಡಿಸೀತೆ?
ಕಾಡ್ಗೀಚು ನಾಡಿಗೆ ಹಬ್ಬಿ ರುಧಿರದ ಹಬ್ಬ ನೆನಪಿಸುತ್ತಿದೆ ನೋಡು


ಸುಕುಮಾರ

About The Author

2 thoughts on “ಡಾ. ಸುನೀಲ್ ಕುಮಾರ್ ಎಸ್.ರವರ ಗಜಲ್”

  1. ಇದೊಂದು ಒಳ್ಳೆಯ ವಾಕ್ಯಾನುಸಾರ ಪದಗಳ ಜೋಡಣೆ. ತುಂಬಾ ಚೆನ್ನಾಗಿದೆ…

  2. ಗಜಲ್ನ ಅಕ್ಷರ ಜೋಡಣೆ ವಾಕ್ಯ ರಚನೆ ತುಂಬಾ ಅರ್ಥ ಪೂರ್ಣ ವಾಗಿದೆ ನಮಗೆ ತುಂಬಾ ಸಂತೋಷ ಇದೇ ರೀತಿ ಒಳ್ಳೆ ಕನ್ನಡ ಗಜಲ್ ಮೂಡಿ ಬರಲಿ ಹೃದಯ ಪೂರ್ವಕ ಶುಭ ಅಭಿನಂದನೆಗಳು ಧನ್ಯವಾದಗಳು ಶುಭಮಸ್ತು

Leave a Reply

You cannot copy content of this page

Scroll to Top